ಭಟ್ಕಳ: ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವಸ್ಥಾನ ಹಾಗೂ ಮಾವಳ್ಳಿ ಹೋಬಳಿಯ ನಾಮಧಾರಿ ಸಮಾಜದ ಅಭಿವೃದ್ಧಿ ಸಂಘದ ವತಿಯಿಂದ ೨೦೨೬-೨೭ನೇ ಸಾಲಿನ ಎಸ್ ಎಸ್ ಎಲ್ ಸಿ (SSLC) ಹಾಗೂ ಪಿ ಯು (PUC) ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (Talent award) ಹಾಗೂ ಪಠ್ಯಪುಸ್ತಕ ವಿತರಣಾ (notebook distribution) ಕಾರ್ಯಕ್ರಮ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮ ಉದ್ಘಾಟಿಸಿದ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ . ನಂತರ ಮಾತನಾಡಿ, ನಮ್ಮ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ವಿದ್ಯಾರ್ಥಿವೇತನವನ್ನು (scholarship) ನೀಡುತ್ತಿದ್ದೇವೆ. ಅದನ್ನು ಪಡೆದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಸಮಾಜಕ್ಕೆ ಗೌರವ ತರುವಂತೆ ಹುದ್ದೆ ಅಲಂಕರಿಸಬೇಕು. ದೊಡ್ಡ ಹುದ್ದೆಗೆ ಏರಿದ ನಂತರ ಸಮಾಜದ ಇತರ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಗುಣ ಹೊಂದಬೇಕು ಎಂದರು.

DG & IGP Commendation Disc/ ಡಿಜಿ – ಐಜಿಪಿ ಪ್ರಶಂಸಾ ಪತ್ರಕ್ಕೆ ಭಟ್ಕಳದ ದೀಪಕ ನಾಯ್ಕ ಆಯ್ಕೆ

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಂದ್ರ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿತು ಇತರರಿಗೆ ಮಾದರಿಯಾಗಬೇಕು ಎಂದರು. ದೇವಸ್ಥಾನದ ಉಪಾಧ್ಯಕ್ಷ ರಾಜು ನಾಯ್ಕ, ಮಾಜಿ ಅಧ್ಯಕ್ಷ ಆರ್ ಕೆ ನಾಯ್ಕ, ಸದಸ್ಯರಾದ ಕೃಷ್ಣ ನಾಯ್ಕ, ಜಮೀನ್ದಾರ, ಪ್ರಮುಖರಾದ ಎಸ್ ಎಂ ನಾಯ್ಕ, ಜಿ ಎನ್ ನಾಯ್ಕ, ಮಾತನಾಡಿದರು.

government school/ ಸರಕಾರಿ ಶಾಲೆಯ ಅಭಿವೃದ್ಧಿಗೆ ಕೇಶ್ನಿಮನೆ ಕುಟುಂಬದ ಕೊಡುಗೆ 

ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಸುಬ್ರಾಯ ನಾಯ್ಕ, ಕಾರ್ಯದರ್ಶಿ ರವೀಂದ್ರ ನಾಯ್ಕ, ವಾಸುದೇವ ನಾಯ್ಕ, ರಾಜು ಟಿ ನಾಯ್ಕ, ನಾರಾಯಣ ನಾಯ್ಕ, ತಿಮ್ಮಪ್ಪ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್ ಪಡೆದ ವರ್ಷಿತಾ ಶಿವಕುಮಾರ ನಾಯ್ಕ ಮೂಡ್ಕೇರಿ ಹಾಗೂ ರಾಜ್ಯಕ್ಕೆ ೮ನೇ ರ‍್ಯಾಂಕ್ ಪಡೆದ ಯೋಗೇಂದ್ರ ವೆಂಕಟೇಶ ನಾಯ್ಕ ಸಣಬಾವಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ೧೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (Talent award) ಹಾಗೂ ೨೪೫ಕ್ಕೂ ಅಧಿಕ ಪಿ ಯು ಪ್ರಥಮ ಹಾಗೂ ದ್ವಿತೀಯ ತರಗತಿಯ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಾಯಿತು. ಶಾರದಾ ನಾಯ್ಕ ಪ್ರಾರ್ಥನೆ ಹಾಡಿದರು. ರಾಜು ನಾಯ್ಕ ಸ್ವಾಗತಿಸಿದರು. ಪರಮೇಶ್ವರ ನಾಯ್ಕ ನಿರೂಪಿಸಿ, ವಂದಿಸಿದರು.

Bhatkal/ ಭಟ್ಕಳಕ್ಕೆ ಎಡಿಜಿಪಿ, ಐಜಿಪಿ ಭೇಟಿ