ಭಟ್ಕಳ ಡೈರಿ ವರದಿ

ಉಡುಪಿ: ಕ್ಯಾನ್ಸರ್‌ ಎಂದರೆ ಜೀವಕ್ಕೆ ಅಪಾಯ ಮಾತ್ರವಲ್ಲ, ಕೆಲವೊಮ್ಮೆ ಅಂಗವೈಕಲ್ಯದ ಭೀತಿಯನ್ನೂ ತಂದೊಡ್ಡುತ್ತದೆ. ವಿಶೇಷವಾಗಿ ಕೈ-ಕಾಲುಗಳ ಮೂಳೆ ಹಾಗೂ ಮಾಂಸಖಂಡಗಳಿಗೆ ತಗುಲುವ ಕ್ಯಾನ್ಸರ್ ಗಡ್ಡೆಗಳಿಂದಾಗಿ ಹಿಂದೆ ಅನೇಕ ಸಂದರ್ಭಗಳಲ್ಲಿ ಅಂಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವುದು ಅನಿವಾರ್ಯವಾಗಿತ್ತು. ಆದರೆ ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದ (medical technology) ಕ್ಯಾನ್ಸರ್‌ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ರೋಗಿಯ ಅಂಗವನ್ನೂ ಉಳಿಸುವ ಸಾಧ್ಯತೆ ಹೆಚ್ಚಾಗಿದೆ (fighting cancer).

Devotional Songs/ ಕುಂದಾಪುರದಲ್ಲಿ ಜನಮನ ಸೆಳೆದ ಗುರುರಾಯರ ಭಕ್ತಿ ಗಾನಾಮೃತ

ಉಡುಪಿಯ (Udupi) ಆದರ್ಶ ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ ಅತ್ಯಂತ ಸಂಕೀರ್ಣವಾದ ಎರಡು ‘ಲಿಂಬ್ ಸಾಲ್ವೇಜ್’ (ಅಂಗ ಉಳಿಸುವ) ಶಸ್ತ್ರಚಿಕಿತ್ಸೆಗಳನ್ನು (surgery) ಯಶಸ್ವಿಯಾಗಿ ನಡೆಸುವ ಮೂಲಕ ವೈದ್ಯರ ತಂಡ ಗಮನಾರ್ಹ ಸಾಧನೆ ಮಾಡಿದೆ. ಕ್ಯಾನ್ಸರ್ ಗಡ್ಡೆಗಳನ್ನು ನಿರ್ಮೂಲನೆ ಮಾಡುವುದರ ಜತೆಗೆ ಇಬ್ಬರೂ ರೋಗಿಗಳ ಕಾಲುಗಳನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ (fighting cancer). ಕರಾವಳಿ ಭಾಗದ (coastal area) ಸುಧಾರಿತ ಸರ್ಜಿಕಲ್ ಅಂಕಾಲಜಿ (surgical Oncology) ಕ್ಷೇತ್ರದಲ್ಲಿ ಈ ಸಾಧನೆ ಮಹತ್ವದ ಮೈಲಿಗಲ್ಲಾಗಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಸರ್ಜಿಕಲ್ ಅಂಕಾಲಜಿಸ್ಟ್ (surgical oncologist) ಡಾ ಅನಂತ್ ಎಸ್ ಮಠದ್, ಅರ್ಥೋ ಅಂಕಾಲಜಿಸ್ಟ್ (artho oncologist) ಡಾ ನವನೀತ್, ಅರಿವಳಿಕೆ ತಜ್ಞ ಡಾ ಸುಖೇನ್ ಶೆಟ್ಟಿ ಹಾಗೂ ಆಸ್ಪತ್ರೆಯ ನರ್ಸಿಂಗ್ ತಂಡ ಪ್ರಮುಖ ಪಾತ್ರ ವಹಿಸಿದೆ.

Bolero collision/ ಮುರುಡೇಶ್ವರದಲ್ಲಿ ಬೊಲೆರೋ ಡಿಕ್ಕಿ: ಸ್ಕೂಟಿ ಸವಾರನಿಗೆ ಗಾಯ

ಕೃತಕ ಟೈಟಾನಿಯಂ ಜಾಯಿಂಟ್ ಅಳವಡಿಕೆ:

ಮೊದಲ ಪ್ರಕರಣದಲ್ಲಿ ೩೧ ವರ್ಷದ ಯುವಕನೊಬ್ಬ ‘ರೈಟ್ ಡಿಸ್ಟಲ್ ಫೀಮರ್ ಕೊಂಡ್ರೋಸಾರ್ಕೋಮಾ’ ಎಂಬ ಮೂಳೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮೊಣಕಾಲಿನ ಮೇಲ್ಭಾಗದ ಮೂಳೆಯನ್ನು ಕ್ಯಾನ್ಸರ್ ಆವರಿಸಿಕೊಂಡಿತ್ತು. ಇಂತಹ ಸಂದರ್ಭದಲ್ಲಿ ಕಾಲನ್ನು ಕತ್ತರಿಸುವ ಬದಲು ವೈದ್ಯರು ಅಂಗ ಉಳಿಸುವ ಶಸ್ತ್ರಚಿಕಿತ್ಸೆಗೆ ಮುಂದಾದರು. ಕ್ಯಾನ್ಸರ್ ಪೀಡಿತ ಮೂಳೆಯ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಅದರ ಸ್ಥಾನದಲ್ಲಿ ಕೃತಕ ಟೈಟಾನಿಯಂ ಜಾಯಿಂಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಯಿತು. ಇದರ ಮೂಲಕ ಕ್ಯಾನ್ಸರ್‌ ಪೀಡಿತ ಭಾಗವನ್ನು ತೆಗೆದುಹಾಕುವುದರ ಜತೆಗೆ ಯುವಕನ ಕಾಲನ್ನೂ ಉಳಿಸಲಾಗಿದೆ.

budget meeting/ ಭಟ್ಕಳ ತಾಲೂಕು ಪಂಚಾಯತಿಯ ಬಜೆಟ್ ಸಭೆ ಯಾವಾಗ ಗೊತ್ತಾ?

ರಕ್ತನಾಳ, ನರಕ್ಕೆ ಹಾನಿಯಾಗದಂತೆ ಗಡ್ಡೆ ತೆರವು:

ಎರಡನೇ ಪ್ರಕರಣ ವೈದ್ಯಕೀಯವಾಗಿ ಮತ್ತಷ್ಟು ಸವಾಲಿನಿಂದ ಕೂಡಿತ್ತು. ರೋಗಿಯ ಬಲ ತೊಡೆಯಲ್ಲಿ ‘ಲಿಪೊಸಾರ್ಕೋಮಾ’ ಎಂಬ ಬೃಹತ್ ಕ್ಯಾನ್ಸರ್ ಗಡ್ಡೆ ಇತ್ತು. ಈ ಗಡ್ಡೆ ಕಾಲಿನ ಪ್ರಮುಖ ರಕ್ತನಾಳಗಳು ಹಾಗೂ ಸಯಾಟಿಕ್ ನರವನ್ನು ಸುತ್ತುವರಿದಿತ್ತು.

electric shock/ ವಿದ್ಯುತ್ ಶಾಕ್‌ಗೆ ಕೂಲಿ ಕಾರ್ಮಿಕ ಸಾವು

ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ವೇಳೆ ರಕ್ತನಾಳ ಅಥವಾ ನರಕ್ಕೆ ಹಾನಿಯಾದರೆ ಕಾಲಿನ ಕಾರ್ಯಕ್ಷಮತೆ ಶಾಶ್ವತವಾಗಿ ಕುಂಠಿತಗೊಳ್ಳುವ ಅಪಾಯವಿತ್ತು. ಆದರೆ ಡಾ ಅನಂತ ಎಸ್ ಮಠದ ನೇತೃತ್ವದ ತಂಡ ಅತ್ಯಂತ ನಿಖರವಾಗಿ ಶಸ್ತ್ರಚಿಕಿತ್ಸೆ ನಡೆಸಿ, ಪ್ರಮುಖ ರಕ್ತನಾಳ ಮತ್ತು ನರಗಳಿಗೆ ಹಾನಿಯಾಗದಂತೆ ಕ್ಯಾನ್ಸರ್ ಗಡ್ಡೆಯನ್ನು ಬೇರ್ಪಡಿಸಿ ಸಂಪೂರ್ಣವಾಗಿ ಹೊರತೆಗೆದಿದೆ.

martyred soldier/ ಹುತಾತ್ಮ ಯೋಧ ವಿನೋದ ನಾಯ್ಕರ ೨೧ನೇ ಪುಣ್ಯತಿಥಿ ಆಚರಣೆ 

‘ರೋಗಿ ತನ್ನ ಕಾಲಿನ ಮೇಲೆ ನಡೆಯುವುದೇ ನಿಜವಾದ ಗೆಲುವು’: ಈ ಕುರಿತು ಸರ್ಜಿಕಲ್ ಅಂಕಾಲಜಿಸ್ಟ್ ಡಾ ಅನಂತ ಎಸ್. ಮಠದ ಮಾತನಾಡಿ, “ಲಿಂಬ್ ಸಾಲ್ವೇಜ್ ಶಸ್ತ್ರಚಿಕಿತ್ಸೆಯು ಸರ್ಜಿಕಲ್ ಅಂಕಾಲಜಿ ಕ್ಷೇತ್ರದಲ್ಲಿನ ಅತ್ಯಂತ ಕಠಿಣ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಹಿಂದೆ ಇಂತಹ ಪ್ರಕರಣಗಳಲ್ಲಿ ಕಾಲನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವುದೇ ಏಕೈಕ ಮಾರ್ಗವಾಗಿತ್ತು. ಆದರೆ ಇಂದು ಆಧುನಿಕ ತಂತ್ರಜ್ಞಾನದಿಂದ ಕ್ಯಾನ್ಸರ್ ನಿರ್ಮೂಲನೆ ಮಾಡುವುದರ ಜೊತೆಗೆ ರೋಗಿಯ ಸ್ವಾವಲಂಬನೆಯನ್ನೂ ಕಾಪಾಡಬಹುದು. ಕುಟುಂಬವನ್ನು ಸಲಹುವ ಯುವಕನೊಬ್ಬ ಕಾಲು ಕಳೆದುಕೊಂಡರೆ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಬೀರುತ್ತದೆ. ರೋಗಿ ತನ್ನದೇ ಕಾಲಿನ ಮೇಲೆ ನಡೆದುಕೊಂಡು ಹೋಗುವುದನ್ನು ನೋಡುವುದೇ ನಿಜವಾದ ಗೆಲುವು” ಎಂದು ಹೇಳಿದರು.

Mechanic dies/ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೆಕ್ಯಾನಿಕ್ ಸಾವು

ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಜಿ ಎಸ್ ಚಂದ್ರಶೇಖರ ಮಾತನಾಡಿ, “ಈ ಸಾಧನೆಯು ಉಡುಪಿಯ ವೈದ್ಯಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಿದೆ. ಸಾರ್ವಜನಿಕರಿಗೆ ನಾವು ನೀಡುವ ಸಂದೇಶ ಇಷ್ಟೇ—ಕ್ಯಾನ್ಸರ್ ಎಂದರೆ ಬದುಕಿನ ಅಂತ್ಯವಲ್ಲ. ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡರೆ ಜೀವದ ಜತೆಗೆ ಜೀವನವನ್ನೂ ಉಳಿಸಿಕೊಳ್ಳಬಹುದು” ಎಂದರು.

Raksha Bandhan/ ಚಿತ್ರಾಪುರ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ