ಭಟ್ಕಳ: ಗುರುವಾರ ಮುರ್ಡೇಶ್ವರದ (Murudeshwar) ಆರ್ ಎನ್ ಎಸ್ ಸಭಾಗೃಹದಲ್ಲಿ ಜಿಲ್ಲಾ ಮಟ್ಟದ ಮಹಾಶಿವರಾತ್ರಿ ಜಾಗರಣೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಆದರ್ಶ ದಂಪತಿಗಳು ಸ್ಪರ್ಧೆ (competition) ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ ಪುಷ್ಪಲತಾ ಎಂ ವೈದ್ಯ, ಈಶ ಫೌಂಡೇಶನ್ ನಡೆಸುತ್ತಿದ್ದ ಶಿವರಾತ್ರಿ ಮಹೋತ್ಸವವನ್ನು ನೋಡಿದಾಗ, ಮುರ್ಡೇಶ್ವರದಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು ಎನ್ನುವ ಸಾವಿರಾರು ಭಕ್ತರ ಹಂಬಲವನ್ನು ಸಚಿವ ಮಂಕಾಳ ಎಸ್ ವೈದ್ಯ ಈಡೇರಿಸಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: cross country/ ಸುಧೀಂದ್ರ ಕಾಲೇಜಿನ ಆಶಿತಾ ನಾಯ್ಕ ಗುಡ್ಡಗಾಡು ಓಟದಲ್ಲಿ ಯುನಿವರ್ಸಿಟಿ ಬ್ಲೂ
ಸ್ಪರ್ಧಾ ಕಾರ್ಯಕ್ರಮವನ್ನು (competition) ಮುರ್ಡೇಶ್ವರದ ಗ್ರಾಮೀಣ ಪ್ರತಿಷ್ಠಾನದ ಅಧ್ಯಕ್ಷ ಎಸ್ ಎಸ್ ಕಾಮತ್ ಉದ್ಘಾಟಿಸಿದರು. ವೇದಿಕೆಯಲ್ಲಿ ಮಾವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಯನಾ ನಾಯ್ಕ ಮತ್ತು ಮುರ್ಡೇಶ್ವರದ ಗೀತಾ ಕಾಮತ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಸಾಹಿತಿ ಶ್ರೀಧರ್ ಶೇಟ್ ಶಿರಾಲಿ ನಿರೂಪಿಸಿದರು.
ಇದನ್ನು ಓದಿ: Biker injured/ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ
ಆ ಬಳಿಕ ಆದರ್ಶ ದಂಪತಿಗಳು ಕಾರ್ಯಕ್ರಮ ವಿವಿಧ ಮನರಂಜನೆಯ ಆಟಗಳು, ಸ್ಮರಣಶಕ್ತಿ ಪರೀಕ್ಷೆ, ಸಾಮಾನ್ಯ ಜ್ಞಾನ ಪರೀಕ್ಷೆ, ಸಿನಿಮಾ ಹಾಡುಗಳನ್ನು ಕಂಡುಹಿಡಿಯುವುದು, ನೃತ್ಯ ಇತ್ಯಾದಿ ಸುತ್ತುಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಸಂತ ನಾಯ್ಕ ಮತ್ತು ಸೀತಾ ದಾಂಪತಿ ಪ್ರಥಮ ಸ್ಥಾನ ಗಳಿಸಿದರೆ, ರಾಜೇಶ ಮತ್ತು ಅನಿತಾ ದ್ವಿತೀಯ ಸ್ಥಾನ ಹಾಗೂ ರಾಮಚಂದ್ರ ಕಿಣಿ ಮತ್ತು ರಿತಿಕಾ ದಂಪತಿ ತೃತೀಯ ಸ್ಥಾನ ಗಳಿಸಿದರು. ಈ ಕಾರ್ಯಕ್ರಮವನ್ನು ಸಂಜನಾ ನಾಗರಾಜ ನಿರೂಪಿಸಿದರು. ಈ ವಿಜೇತರುಗಳಿಗೆ ಫೆಬ್ರುವರಿ ೧೫ರಂದು ಸಂಜೆ ಮುರ್ಡೇಶ್ವರದಲ್ಲಿ ನಡೆಯಲಿರುವ ಶಿವರಾತ್ರಿ ಜಾಗರಣೋತ್ಸವದಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತದೆ.
ಇದನ್ನು ಓದಿ: brain disease/ ಮೆದುಳು ರೋಗಕ್ಕೆ ಹೆದರಿದ ಮಹಿಳೆ ಮಾಡಿದ್ದೇನು?



