ಭಟ್ಕಳ: ತಾಲೂಕಿನ ಭಟ್ಟಗಾಂವ್ ನಿವಾಸಿಯಾಗಿರುವ ತರಕಾರಿ ವ್ಯಾಪಾರಿ ಕುಟುಂಬಕ್ಕೆ ಅಪರಿಚಿತರಿಂದ ಭಾರಿ ಹಣದ ಬೆದರಿಕೆ ಒಡ್ಡಲಾಗಿದೆ (threat). ವಿದೇಶಿ ಫೋನ್ ನಂಬರ್‌ನಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಅವರ ಮಗಳಿಗೆ ಸಂಬಂಧಿಸಿದ ಖಾಸಗಿ ಫೋಟೋ ಮತ್ತು ವಿಡಿಯೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿ (threat ) ೨೦ ಲಕ್ಷ ರೂ ಹಣ ಬೇಡಿಕೆಯಿಟ್ಟಿರುವುದು ಬಹಿರಂಗವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಣ ನೀಡದಿದ್ದರೆ ಈ ವಿಷಯವನ್ನು ಎಲ್ಲೆಡೆ ಹಂಚುವುದಾಗಿ ಅಪರಿಚಿತ ಬೆದರಿಕೆಯೊಡ್ಡಿದ್ದಾನೆ. ಬಳಿಕ ಅನ್ವರಭಾಷಾ‌ ಅವರ ಪತ್ನಿಗೆ ಕರೆ ಮಾಡಿ ಕನಿಷ್ಠ ೧೫  ಲಕ್ಷ ರೂ ನೀಡಲು ಒತ್ತಾಯ ಮಾಡಿದ್ದಾನೆ. ಈ ಕುರಿತು ಅನ್ವರ ಭಾಷಾ ಎಂಬುವವರು ಭಟ್ಕಳ (Bhatkal) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ (case filed). ಪೊಲೀಸ್ ಸಿಬ್ಬಂದಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Murudeshwar/ ಮುರುಡೇಶ್ವರದಲ್ಲಿ ಗುಂಪುಗಳ ನಡುವೆ ಹೊಡೆದಾಟ: ಇಬ್ಬರು ಆಸ್ಪತ್ರೆಗೆ ದಾಖಲು