ಭಟ್ಕಳ: ಕಳೆದ ಸುಮಾರು ಮೂರುವರೆ ತಿಂಗಳ ಹಿಂದೆ ಭಟ್ಕಳದಲ್ಲಿ (Bhatkal) ಕಾಣೆಯಾಗಿದ್ದ ಕುಮಟಾ (Kumta) ತಾಲೂಕಿನ ಮದ್ಗುಣಿ–ಹಳ್ಳಾರ ಗ್ರಾಮದ ನಿವಾಸಿ ಜಾಕೀರ ಬೇಗ ತಂದೆ ಬುಡಾನ ಬೇಗ (33) ಅವರನ್ನು ಭಟ್ಕಳ ಶಹರ ಪೊಲೀಸರು ತುಮಕೂರಿನಲ್ಲಿ (Tumkur) ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ (Timely action).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಮದುವೆಗೆ ಸಂಬಂಧಿಸಿದಂತೆ ಚಿನ್ನ ಖರೀದಿಸಲು ಕುಮಟಾದಿಂದ ಭಟ್ಕಳಕ್ಕೆ ಬಂದಿದ್ದ ಜಾಕೀರ ಬೇಗ, ನೂರಪಳ್ಳಿ ಮಸೀದಿಗೆ ನಮಾಜ್ ಮಾಡಲು ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದರು. ಆದರೆ ನಂತರ ಯಾವುದೇ ಮಾಹಿತಿ ನೀಡದೇ ಕಾಣೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನು ಓದಿ: Hit and run/ ಡಿಕ್ಕಿ ಹೊಡೆದು ಕಾರು ಪರಾರಿ: ಆಟೋರಿಕ್ಷಾ ಪಲ್ಟಿ; ಗರ್ಭಿಣಿ ಸಹಿತ ಆರು ಜನರು ಆಸ್ಪತ್ರೆಗೆ
ದೂರು ದಾಖಲಿಸಿಕೊಂಡ ಭಟ್ಕಳ ಶಹರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಜಾಕೀರ ಬೇಗ ತಮ್ಮ ಬಳಿಯಿದ್ದ ಮೊಬೈಲ್ ಫೋನ್ ಅನ್ನು ಮಾರಾಟ ಮಾಡಿ, ತುಮಕೂರಿನ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿರುವುದು ತಿಳಿದುಬಂದಿದೆ.
ಇದನ್ನು ಓದಿ: Makkala Santhe/ ಹಡೀನ ಶಾಲೆಯಲ್ಲಿ ಮಕ್ಕಳ ಸಂತೆ ಯಶಸ್ವಿ
ಭಟ್ಕಳ ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿವಾಕರ ಪಿ ಎಂ ಅವರ ನೇತೃತ್ವದಲ್ಲಿ ಪಿಎಸ್‌ಐ ನವೀನ್ ಎಸ್ ನಾಯ್ಕ ಹಾಗೂ ಸಿಬ್ಬಂದಿ ರವಿ ಪಟಗಾರ, ದೇವು ಆರ್ ನಾಯ್ಕ, ಕಾಶಿನಾಥ ಕೊಟಗುಣಶಿ ಅವರನ್ನು ಒಳಗೊಂಡ ತಂಡವನ್ನು ಬೆಂಗಳೂರು–ತುಮಕೂರು ಭಾಗಕ್ಕೆ ಕಳುಹಿಸಲಾಗಿತ್ತು. ತಾಂತ್ರಿಕ ಕರೆಗಳ ಮಾಹಿತಿಯ ಆಧಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ತುಮಕೂರಿನಲ್ಲಿ ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದೆ.
ಇದನ್ನು ಓದಿ: breaking news/ ಮಂಗಳೂರು ಬಳಿ ಅಪಘಾತದಲ್ಲಿ ಭಟ್ಕಳದ ಯುವಕ ಸಾವು
ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ, ಡಿವೈಎಸ್ಪಿ ಮಹೇಶ್ ಎಂ ನಿರ್ದೇಶನದಂತೆ ನಡೆಯಿತು. ಕಾರವಾರ ಟೆಕ್ನಿಕಲ್ ಸೆಲ್‌ನ ಸಿಬ್ಬಂದಿ ಉದಯ ಗುನಗಾ ಮತ್ತು ಬಬನ್ ಕದಂ ಅವರ ಸಹಕಾರವೂ ಕಾರ್ಯಾಚರಣೆಗೆ ಲಭಿಸಿದೆ. ಭಟ್ಕಳ ಶಹರ ಪೊಲೀಸರ ಸಮಯೋಚಿತ ಕ್ರಮದಿಂದಾಗಿ (Timely action) ಕಾಣೆಯಾದ ವ್ಯಕ್ತಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ.
ಇದನ್ನು ಓದಿ: Stone temple/ ಪಶುಪತಿ ದೇವರಿಗೆ ಶಿಲಾಮಯ ಗುಡಿ



