ಭಟ್ಕಳ (Bhatkal) : ಟಿಪ್ಪರ್ ಡಿಕ್ಕಿಯಾಗಿ (tipper collide with scooter) ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಗಾಯಗೊಂಡ ಘಟನೆ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಭಟ್ಕಳ ತಾಲೂಕಿನ ಮಾರುಕೇರಿ ಪಂಚಾಯತ್ ವ್ಯಾಪ್ತಿಯ ಕೋಟಖಂಡ ನಿವಾಸಿಯಾಗಿರುವ ಶಿರಾಲಿ ಗ್ರಾಮ ಲೆಕ್ಕಾಧಿಕಾರಿ ಹೇಮಾ ಎನ್.ನಾಯ್ಕ (೩೮) ಗಾಯಗೊಂಡವರು. ಟಿಪ್ಪರ್ ಲಾರಿ ಚಾಲಕ ಭಟ್ಕಳದ ಶಿರಕುಳಿಹೊಂಡ ನಿವಾಸಿ ಅರ್ಶದ್ ಹುಸೇನ್ ಮುಸ್ತಕ್ ಅಹ್ಮದ್ ವಿರುದ್ಧ ಶಹರ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ. ಇವರು ಭಟ್ಕಳ ಕಡೆಯಿಂದ ಶಿರಾಲಿ ಕಡೆಗೆ ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಮುರುಡೇಶ್ವರ, ಇಡಗುಂಜಿಗೆ ಪೂಜಾ ಗಾಂಧಿ ಭೇಟಿ
ಮುರಿನಕಟ್ಟಾ ಹತ್ತಿರ ಒಮ್ಮೇಲೆ ಯುಟರ್ನ್ ತೆಗೆದುಕೊಂಡಾಗ ಹಿಂದಿನಿಂದ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ (tipper collide with scooter). ಈ ಕುರಿತು ಮುಟ್ಟಳ್ಳಿ ನಿವಾಸಿ ಗ್ರಾಮ ಸಹಾಯಕ ಮಂಜುನಾಥ ವೆಂಕಟರಮಣ ನಾಯ್ಕ ದೂರು ದಾಖಲಿಸಿದ್ದಾರೆ. ಹಿಂದಿನಿಂದ ಬರುವ ವಾಹನಗಳನ್ನು ನೋಡದೆ, ಯಾವುದೇ ಸಿಗ್ನಲ್ ನೀಡದೆ ಯು ಟರ್ನ್ ಮಾಡಿ ತಿರುಗಿಸಿದ್ದರಿಂದ ಸ್ಕೂಟರ್‌ಗೆ ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ : ಕಾರು ಡಿಕ್ಕಿಯಾಗಿ ಸ್ಕೂಟಿ ಸವಾರ ಗಂಭೀರ