ಭಟ್ಕಳ (Bhatkal) : ಮುರುಡೇಶ್ವರದ (Murudeshwar) ರಾಷ್ಟ್ರೀಯ ಹೆದ್ದಾರಿ (National Highway) – 66ರ ಬಸ್ತಿಮಕ್ಕಿ ಮೂಕಾಂಬಿಕಾ ವಾಟರ್ ಸರ್ವಿಸ್ ಸಮೀಪ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶಿರಸಿಯಲ್ಲಿ (Sirsi) ಬಂಧಿಸುವಲ್ಲಿ ಮುರುಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ (arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರದ ಸಂತಿಸಿಲ್ಲಿ ನಿವಾಸಿ  ಮಹೇಶ ತಪರಸಪ್ಪ ಕುರಿ (೨೬) ಮತ್ತು ಹುಬ್ಬಳ್ಳಿಯ (Hubballi) ಕೃಷ್ಣಾ ಕಾಲೋನಿಯ ಆನಂದ ನಗರ ನಿವಾಸಿ ಮಣಿಕಂಠ ಹಣಮಂತ ಶಿರಹಟ್ಟಿ (೨೨) ಬಂಧಿತರು. ಇವರು ಏ.೧೭ರಂದು ಮಧ್ಯಾಹ್ನ ವೇಳೆ ಮುರ್ಡೇಶ್ವರದ (Murdeshwar) ಬಸ್ತಿಮಕ್ಕಿಯಲ್ಲಿರುವ ಮೂಕಾಂಬಿಕಾ ವಾಟರ್ ಸರ್ವಿಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ನಾಗಮ್ಮ ಸುಕ್ರ ಮೊಗೇರ ಅವರ ಮಾಂಗಲ್ಯ ಸರ ಎಗರಿಸಿಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ : accident/ ಬೈಕ್‌ ಸವಾರ ಸ್ಥಳದಲ್ಲೇ ಸಾವು

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮುರುಡೇಶ್ವರ ಠಾಣೆಯ ಪೊಲೀಸರು ಆರೋಪಿತರ ಪತ್ತೆಗೆ ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ. ಹಾಗೂ ಭಟ್ಕಳ ಡಿವೈಎಸ್ಪಿ ಮಹೇಶ ಕೆ. ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಶಿರಸಿಯಲ್ಲಿ ಬಂದಿತ (arrested) ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ೧.೫೦ ಲಕ್ಷ ರೂ. ಬೆಲೆಬಾಳುವ ಬೈಕ್‌, ಸರಗಳ್ಳತನ ಮಾಡಿದ್ದ ೨೬ ಗ್ರಾಂ ತೂಕದ ೨.೨೦ ಲಕ್ಷ ರೂ. ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರ ಹಾಗೂ ಎರಡು ಮೊಬೈಲ್ ಪೋನ್ ಒಟ್ಟು ಅಂದಾಜು ೩.೮೦ ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : Memorandum/ಗರ್ಭಿಣಿ ಗೋ ಹಂತಕರ ಬಂಧನಕ್ಕೆ ಹಿಂಜಾವೇ ಆಗ್ರಹ

ಭಟ್ಕಳ ಗ್ರಾಮೀಣ ಠಾಣೆಯ ಸಿ.ಪಿ.ಐ. ಸಂತೋಷ ಕಾಯ್ಕಿಣಿ, ಮುರುಡೇಶ್ವರ ಪೊಲೀಸ್ ಠಾಣೆ ಪಿ.ಎಸ್. ಐ ಹಣಮಂತ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸಿಬ್ಬಂದಿಗಳಾದ ಸುಬ್ರಮಣ್ಯ ನಾಯ್ಕ, ಮಂಜುನಾಥ ಲಕ್ಕಾಪೂರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ,ಮಂಕಿ ಪೊಲೀಸ್ ಠಾಣೆಯ ಸಿಬ್ಬಂದಿ ಕಿರಣಕುಮಾರ ರೆಡ್ಡಿ, ಅಣ್ಣಪ್ಪ ಕೋರಿ ಹಾಗೂ ಶಿರಸಿ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಾದ, ಸಂತೋಷ ಕಮಟಗೇರಿ, ಹನಮಂತ ಬರ್ಗಿ, ಪ್ರಶಾಂತ ಪಾವಸ್ಕರ, ಶಿವಲಿಂಗ ತುಪ್ಪದ, ಮಾಲತೇಶ, ರಾಮಯ್ಯ, ಮಂಜು ಪೂಜಾರಿ, ಸದ್ದಾಂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : Special team / ಗರ್ಭಿಣಿ ಗೋವಧೆ ಆರೋಪಿಗಳ ಪತ್ತೆಗೆ ವಿಶೇಷ ತಂಡ