ಭಟ್ಕಳ (Bhatkal): ಗಾಂಜಾ ಸೇವನೆ ಮಾಡಿದ ಬೆಂಗಳೂರಿನ ಇಬ್ಬರು ಯುವಕರನ್ನು ಮುರುಡೇಶ್ವರ (Murudeshwara) ಪೊಲೀಸರು ಜೂನ್ 27ರಂದು ವಶಕ್ಕೆ ಪಡೆದು (Youths in police custody) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನ (Bengaluru) ಕಾಮಾಕ್ಷಿಪಾಳ್ಯ ನಿವಾಸಿಗಳಾದ ರಘು ಎಮ್ ತಂದೆ ಮಹಾದೇವ (೨೭) ಮತ್ತು ಆರ್ ಸಂತೋಷ ತಂದೆ ರಾಮು (೨೮) ಬಂಧಿತರು. ಗಾಂಜಾ ಸೇವಿಸಿದ ಅನುಮಾನದ ಮೇಲೆ ಮುರುಡೇಶ್ವರ ಠಾಣೆ ಪಿಎಸ್ಐ ಹಣಮಂತ ಬಿರಾದಾರ ಇವರಿಬ್ಬರನ್ನು ವಶಕ್ಕೆ ಪಡೆದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.

ಇದನ್ನು ಓದಿ: Chain snatching attempt/ ಮನೆಯಲ್ಲಿ ಮಲಗಿದ್ದ ಮಹಿಳೆಯ ಚಿನ್ನದ ಸರ ಎಗರಿಸಲು ಯತ್ನ

ಆರೋಪಿ ರಘು ಎಂಬಾತನನ್ನು ಮಧ್ಯಾಹ್ನ ೩.೨೦ರ ಸುಮಾರಿಗೆ ಮುರ್ಡೇಶ್ವರದ (Murdeshwar) ಎಡ ಬದಿಯ ಬೀಚ್ ಹತ್ತಿರ ಮತ್ತು ಆರ್ ಸಂತೋಷ್ ಎಂಬಾತನನ್ನು ಮುರ್ಡೇಶ್ವರದ ಬಸ್ತಿಮಕ್ಕಿ ಕ್ರಾಸ್ ಹತ್ತಿರದ ಪಂಚರ ಸಮಕ್ಷಮ ಸಿಬ್ಬಂದಿ ಜೊತೆಯಲ್ಲಿ ವಶಕ್ಕೆ ಪಡೆಯಲಾಗಿತ್ತು (Youths in police custody). ಇಬ್ಬರು ಆರೋಪಿತರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ (complaint filed).

ಇದನ್ನು ಓದಿ: Young man arrested/ ಮುರುಡೇಶ್ವರದಲ್ಲಿ ಅಳ್ವೆಕೋಡಿ ಯುವಕ ವಶಕ್ಕೆ