ಭಟ್ಕಳ: ನ್ಯಾಯಾಲಯದಿಂದ ಬಂದ ಅಮಲ್‌ಜ್ಯಾರಿ, ದಸ್ತಗಿರಿ ವಾರೆಂಟ್‌ನ್ನು ಬಜಾವಣೆ ಮಾಡುವ ಕರ್ತವ್ಯಕ್ಕೆ ತೆರಳಿದ್ದ ಬೇಲಿಪ್ ಮೇಲೆ ಸಹೋದರರಿಬ್ಬರು ಹಲ್ಲೆ (Assault) ನಡೆಸಿರುವ ಘಟನೆ ಮುರುಡೇಶ್ವರದಲ್ಲಿ (Murudeshwar) ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರುಡೇಶ್ವರ ಮಾವಳ್ಳಿಯ ನ್ಯಾಷನಲ್ ಕಾಲೋನಿ ನಿವಾಸಿಗಳಾದ ಮೊಹ್ಮದ್‌ ಇರ್ಫಾನ್‌ ಅಬುಬಕರ್  ಹಜೀಅಮೀನ್‌ ತಂದೆ ಅಬುಬಕರ್ ಹಜೀಅಮೀನ್ ಮತ್ತು ಸೂಪಿಯಾನ್‌ ಅಬುಬಕರ್ ಹಜೀಅಮೀನ್‌ ತಂದೆ ಅಬುಬಕರ್ ಹಜೀಅಮೀನ್ ಹಲ್ಲೆ ನಡೆಸಿದ ಸಹೋದರರು.

ಇದನ್ನು ಓದಿ: bike skidded/ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್

ಭಟ್ಕಳ (Bhatkal) ತಾಲೂಕಿನ ಬಂದರ್ ಮಾವಿನಕುರ್ವೆಯ ತಲಗೋಡ ಸಿತಾರಾಮ ಮನೆ ನಿವಾಸಿ ಗಣಪತಿ ತಂದೆ ಹನುಮಂತ ನಾಯ್ಕ(೪೧) ಹಲ್ಲೆಗೊಳಗಾದವರು. ಇವರು ಕಳೆದ ೧೯ ವರ್ಷದಿಂದ ನ್ಯಾಯಾಂಗ ಇಲಾಖೆಯ ಕೋರ್ಟ ಬೆಲಿಪ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ಯ ಕಳೆದ ೨ ತಿಂಗಳಿನಿಂದ ಹಿರಿಯ ಸಿವಿಲ್ ನ್ಯಾಯಾಲಯ ಕುಮಟಾದಿಂದ (Kumta) ಡೆಪಟೇಶನ್ ಮೇಲೆ ಪ್ರಧಾನ ಸಿವಿಲ್ ನ್ಯಾಯಾಲಯ ಜೆ.ಎಮ್.ಎಫ್.ಸಿ ಭಟ್ಕಳ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಇವರು ನ್ಯಾಯಾಲಯದಿಂದ ಬಂದ ಅಮಲ್‌ಜ್ಯಾರಿ, ದಸ್ತಗಿರಿ ವಾರೆಂಟ್‌ನ್ನು ಬಜಾವಣೆ ಮಾಡುವ ಕರ್ತವ್ಯ ಮಾಡುತ್ತಿದ್ದಾರೆ.

ಇದನ್ನು ಓದಿ: Fisherman died/ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮೀನುಗಾರ ಸಾವು

ಇವರು ಜನವರಿ ೬ ರಂದು ಸಂಜೆ ೪ರ ಸುಮಾರಿಗೆ ಪ್ರಧಾನ ಸಿವಿಲ್ ನ್ಯಾಯಾಲಯ ಜೆ.ಎಮ್.ಎಫ್.ಸಿ ಭಟ್ಕಳ ನ್ಯಾಯಾಲಯದ ಪ್ರಕರಣ ಒಂದರ ಎದುರುದಾರ ಮೊಹ್ಮದ್‌ ಇರ್ಫಾನ್‌ ವಿರುದ್ಧ ಹೊರಡಿಸಿದ ದಸ್ತಗಿರಿ ವಾರೆಂಟ ಬಚಾವಣೆಗೆ ಹೋದಾಗ ಹಲ್ಲೆ (Assault) ನಡೆದಿದೆ. ಅರ್ಜಿದಾರ ಶ್ರೀರಾಮ್ ಟ್ರಾನಸ್ಪೋರ್ಟ ಪೈನಾನ್ಸ್ ಭಟ್ಕಳ ಇವರ ಸಿಬ್ಬಂದಿ ರೋಹಿತ್‌ ತಂದೆ ದತ್ತಾತ್ರೇಯ ಶೆಟ್ಟಿ ಹಾಗೂ ಗಣೇಶ ಹನುಮಂತ ನಾಯ್ಕ ಇವರನ್ನು ಜೊತೆಗೆ ಕರೆದುಕೊಂಡು ಆಪಾದಿತನ ವಿಳಾಸವಾದ ಮುರ್ಡೇಶ್ವರದ ನ್ಯಾಶನಲ್‌ ಕಾಲೋನಿಯ ಆತನ ಮನೆಯ ಹತ್ತಿರ ಹೋಗಿದ್ದರು.

ಇದನ್ನು ಓದಿ: Assault/ ನೆರೆಮನೆಯವರಿಂದ ಮಹಿಳೆಯ ಮೇಲೆ ಹಲ್ಲೆ

ಮೊಹ್ಮದ್‌ಇರ್ಫಾನ್‌ ಈತನಿಗೆ ವಾರೆಂಟ್ ಬಗ್ಗೆ ತಿಳಿಸಿದಾಗ ಆತನು ಬೆಲಿಪ್ ಎದೆಗೆ ಕೈ ಹಾಕಿ ದೂಡಿದ್ದಾನೆ. ಮನೆಯ ಒಳಗೆ ಹೋಗಿ ಅವನ ಅಣ್ಣ ಸೂಪಿಯಾನ್‌ ಈತನನ್ನು ಕರೆದುಕೊಂಡು ಬಂದು ಗಲಾಟೆ ಮಾಡಿ, ಅವಾಚ್ಯವಾಗಿ ಬೈದು, ಬೆದರಿಕೆ ಹಾಕಿ ನ್ಯಾಯಾಲಯದಿಂದ ಬಂದ ವಾರೆಂಟನ್ನು ಜ್ಯಾರಿ ಮಾಡಲು ಹೋದ ಬೇಲೀಪ್ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನು ಓದಿ: bikers injured/ ಡಿಗ್ಗರ್ ಟ್ರಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರಿಗೆ ಗಾಯ