ಭಟ್ಕಳ (Bhatkal): ಪ್ರತಿಷ್ಠಿತ ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ (Urban Bank)ನ ನೂತನ ಅಧ್ಯಕ್ಷರಾಗಿ ಮೆಹಬೂಬಿ ಬಾಬಾಲಾಲ್ ಸಾಹೇಬ್ ಪಟೇಲ್ ಹಾಗೂ ಉಪಾಧ್ಯಕ್ಷರಾಗಿ ತುಳಿಸಿದಾಸ ಮಾಸ್ತಿ ಮೊಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ಅರ್ಬನ್ ಬ್ಯಾಂಕ್ ನಲ್ಲಿ (Urban Bank) ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಚುನಾವಣೆ ಅಧಿಕಾರಿಯಾಗಿ ಜಿ.ಕೆ. ಭಟ್ ಉಪಸ್ಥಿತಿಯಲ್ಲಿ ನಡೆಯಿತು. ಬ್ಯಾಂಕ್ ನಿರ್ದೇಶಕ ಮಂಡಳಿಯ ಇತಿಹಾಸದಲ್ಲಿ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಮೆಹಬೂಬಿ ಬಾಬಾಲಾಲ್ ಸಾಹೇಬ್ ಪಟೇಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ತುಳಸಿದಾಸ ಮಾಸ್ತಿ ಮೊಗೇರ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಮೆಹಬೂಬಿ ಬಾಬಾಲಾಲ್ ಸಾಹೇಬ್ ಪಟೇಲ್ ೩೫ ವರ್ಷಗಳ ಕಾಲ ಸರ್ಕಾರಿ ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಭಟ್ಕಳದಲ್ಲಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : Editorial/ ಗೋ ಹತ್ಯೆ ಸಂಪೂರ್ಣವಾಗಿ ನಿಲ್ಲಲಿ
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ನಿರ್ದೇಶಕರಾದ ಬೀನಾ ವೈದ್ಯ, ಶ್ರೀಕಾಂತ ನಾಯ್ಕ, ಪದ್ಮನಾಭ ಪೈ, ಅಬ್ದುಲ್ ಖಾಲಿಕ್ ಅಬ್ದುಲ್ ಹಾದಿ ಸೌದಾಗರ, ವಸಂತ ದೇವಾಡಿಗ, ಶ್ರೀಧರ ನಾಯ್ಕ, ರಮೇಶ ಸುಕ್ರ ನಾಯ್ಕ , ರಾಮ ನಾಯ್ಕ, ಮನ್ಯೂಯಲ್ ಎಂ ಲಿಮಾ, ಗಣಪತಿ ಮೊಗೇರ, ಸಂತೋಷ ಗೊಂಡ, ಸುರೇಶ ಪೂಜಾರಿ, ಮೊಹಮ್ಮದ್ ಅಯುಬ್ ಹಮ್ಜಾ ಉಪಸ್ಥಿತರಿದ್ದರು.
ಇದನ್ನೂ ಓದಿ : Honour/ ಕೋಟಖಂಡದಲ್ಲಿ ನಿವೃತ್ತ ಅಧಿಕಾರಿಗೆ ಸನ್ಮಾನ