ಭಟ್ಕಳ (Bhatkal) : ಕರ್ನಾಟಕ (Karnataka) ಉರ್ದು ಅಕಾಡೆಮಿಯು (Urdu Academy) ಪ್ರಖ್ಯಾತ ಕವಯಿತ್ರಿ ಹಾಗೂ ಸಾಹಿತಿ ಡಾ. ಫರ್ಝಾನಾ ಫರಾಹ್ ಅವರ ಕವನ ಸಂಕಲನ ‘ರುಕಾ ಸಾ ಮೌಸಮ್’ ಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಉರ್ದು ಸಾಹಿತ್ಯ (Literature) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ (Academy Award). ಪ್ರಶಸ್ತಿಯು ₹೨೫೦೦೦ ನಗದು, ಪ್ರಶಂಸಾಪತ್ರ, ಶಾಲು ಮತ್ತು ಹಾರವನ್ನು ಒಳಗೊಂಡಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರು (Bengaluru) ಕೆಎಂಡಿಸಿ (KMDC) ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ (Karnataka CM) ರಾಜಕೀಯ ಸಲಹೆಗಾರರಾದ (Political Advisor) ನಸೀರ್ ಅಹ್ಮದ್ ಈ ಗೌರವವನ್ನು(Academy Award) ಪ್ರದಾನ ಮಾಡಿದರು. ಈ ಸಂದರ್ಭ ಎಂಎಲ್‌ಸಿ ಬಿಲ್ಕಿಸ್ ಬಾನು, ಅಕಾಡೆಮಿ ಅಧ್ಯಕ್ಷ ಮುಫ್ತಿ ಮೊಹಮ್ಮದ್ ಅಲಿ ಖಾಝಿ, ಅಕಾಡೆಮಿ ಸದಸ್ಯರು ಹಾಗೂ ಉರ್ದು ಸಾಹಿತ್ಯ ಪ್ರೇಮಿಗಳು ಉಪಸ್ಥಿತರಿದ್ದರು.

ವಿಡಿಯೋ ಸಹಿತ ಇದನ್ನೂಓದಿ : School Van Accident/ ಶಾಲಾ ವಾಹನ ಅಪಘಾತ

ಭಟ್ಕಳದ ಅಂಜುಮನ್ (Anjuman) ಪ್ರಿ-ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಫರ್ಝಾನಾ ಫರಾಹ್, ಕವಯಿತ್ರಿಯಾಗಿ ಮಾತ್ರವಲ್ಲದೆ ವಿಡಂಬನೆ ಮತ್ತು ಪ್ರಬಂಧ ಲೇಖಕಿಯಾಗಿಯೂ ಖ್ಯಾತಿ ಪಡೆದಿದ್ದಾರೆ. ಅವರ ‘ಶೋಖಿ ತಹ್ರೀರ್’, ‘ದೇಖ್ನಾ ತಹ್ರೀರ್ ಕಿ ಲಝ್ಝತ್’ ಮತ್ತು ‘ಗುಲ್ ಅಫ್ಶಾನಿಯಾನ್’ ಎಂಬ ಮೂರು ಪ್ರಬಂಧ ಸಂಕಲನಗಳು ಸಾಕಷ್ಟು ಮೆಚ್ಚುಗೆ ಪಡೆದಿವೆ.

ಇದನ್ನೂ ಓದಿ : Yakshagana/ ಭಟ್ಕಳದಲ್ಲಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ