ಭಟ್ಕಳ (Bhatkal) : ತಾಲೂಕಿನ ಅರವಕ್ಕಿಯ ಶ್ರೀ ವನದುರ್ಗಾ(Vanadurga) ದೇವಿ ದೇವಸ್ಥಾನದಲ್ಲಿ ಶ್ರೀ ವನದುರ್ಗಾ (Vanadurga) ದೇವಿ ವಾರ್ಷಿಕೋತ್ಸವ ಫೆಬ್ರವರಿ ೧೦ರಂದು ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂದು ಬೆಳಿಗ್ಗೆ ೯ ಗಂಟೆಗೆ ದುರ್ಗಾಹೋಮ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ. ರಾತ್ರಿ ೯ ಗಂಟೆಗೆ ಹೊನ್ನಾವರ ತಾಲೂಕಿನ ಹಾಡಗೇರಿಯ ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ ಅವರಿಂದ ಭಕ್ತಿ ಸಂಗೀತ ಆಯೋಜಿಸಲಾಗಿದೆ. ಕಾರ್ಯಕ್ರಮದ ನೇತೃತ್ವ ವಹಿಸಲಿರುವ ಶ್ರೀಕಾಂತ ಹಾಡಗೇರಿ, ರಾಘವೇಂದ್ರ ಪಟಗಾರ, ವಿನಾಯಕ ಅಂಬಿಗ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಇವರಿಗೆ ತಬಲದಲ್ಲಿ ಹರೀಶ ರಾಯ್ಕರ ಮತ್ತು ಗುಂಡಬಾಳದ ಅಜಿತ ಭಟ್, ಸಂವಾದಿನಿಯಲ್ಲಿ ವಿಶ್ಲೇಶ ಗೌಡ ಸಾಥ್ ನೀಡಲಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ: Namadhari/ ಶ್ರೀ ವೆಂಕಟರಮಣ ದೇವರ ಅದ್ದೂರಿ ಪಲ್ಲಕ್ಕಿ ಮೆರವಣಿಗೆ