ಭಟ್ಕಳ: ಇಲ್ಲಿನ ಐಸಿಎಸ್‌ಸಿ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ೫ನೇ ತರಗತಿ ವಿದ್ಯಾರ್ಥಿ ತೇಜ್ವಲಪ್ರಭ ಎನ್ ಡಿ ಲೀಡ್ ಸಂಸ್ಥೆಯು ನಡೆಸಿದ ರಾಷ್ಟ್ರಮಟ್ಟದ (national level) ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ (national level) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಈ ವಿದ್ಯಾರ್ಥಿಯು ಆಧುನಿಕ ತಂತ್ರಜ್ಞಾನ ಆಧಾರಿತ ಮನೆಯ ವಿನ್ಯಾಸವನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ್ದಾನೆ.

ಇದನ್ನು ಓದಿ: grand welcome/ ಹುಟ್ಟೂರಿಗೆ ಬಂದ ಹೆಮ್ಮೆಯ ಸೈನಿಕಗೆ ಅದ್ದೂರಿ ಸ್ವಾಗತ 

ಇದೇ ಕಾರ್ಯಕ್ರಮದಲ್ಲಿ ಕೋಡಿಂಗ್ ವಿಭಾಗದಲ್ಲಿ ಮತ್ತು ಇಂಗ್ಲಿಷ್ ಕ್ವಿಜ್ ವಿಭಾಗದಲ್ಲಿ ಇನ್ನೋರ್ವ ವಿದ್ಯಾರ್ಥಿನಿ ಮಾನ್ಯ ಲಕ್ಷ್ಮೀಶ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದು ಶಾಲೆಯ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಭಟ್ಕಳ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾಕ್ಟರ್ ಸುರೇಶ ನಾಯಕ ಅಭಿನಂದಿಸಿದ್ದಾರೆ. ಟ್ರಸ್ಟಿನ ಸದಸ್ಯರು, ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಪಾಲಕರು ವಿದ್ಯಾರ್ಥಿಯ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Farewell/ ಸೇವಾ ನಿವೃತ್ತಿಯಾದ ಮುಖ್ಯ ಶಿಕ್ಷಕಗೆ ಬೀಳ್ಕೊಡುಗೆ