ಹೊನ್ನಾವರ (Honavar) : ತಾಲೂಕ ಆಡಳಿತ, ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘ, ತಾಲೂಕು ವಿಶ್ವಕರ್ಮ ಅಭಿವೃದ್ಧಿ ಸಂಘ, ಶ್ರೀ ಇಡಗುಂಜಿ (Idagunji) ಮಹಾಗಣಪತಿ ವಿಶ್ವಕರ್ಮ ಟ್ರಸ್ಟ್‌ ಸಹಯೋಗದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ (Vishwakarma Jayanti) ಹಮ್ಮಿಕೊಳ್ಳಲಾಗಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಭಾ ಕಾರ್ಯಕ್ರಮವನ್ನು ತಹಶೀಲ್ದಾರ ರವಿರಾಜ ದೀಕ್ಷಿತ ಉದ್ಘಾಟಿಸಿ ಸಮಾಜದ ಕೊಡುಗೆ ಸ್ಮರಿಸಿ ಶುಭ ಹಾರೈಸಿದರು. ಕಮ್ಮಾರಿಕೆಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿರುವ ಬಳಕೂರಿನ ವಿಶೇಷ ಚೇತನ ವ್ಯಕ್ತಿಯಾದ ತ್ರಯಂಬಕ ಹೊನ್ನಪ್ಪ ಆಚಾರ್ಯ ಇವರನ್ನು ವಿಶ್ವಕರ್ಮ ಸಂಘಟನೆಗಳ ಪರವಾಗಿ ಸನ್ಮಾನಿಯಾಯಿತು.

ಇದನ್ನೂಓದಿ : bharatnatyam/ ಸಾಪ್ತಾಹಿಕ ಸರಣಿಯಲ್ಲಿ ಮನ ಸೆಳೆದ ಪ್ರತಿಭೆ

ಉಪನ್ಯಾಸಕರಾಗಿ ಆಗಮಿಸಿದ ಡಾ.ಎಸ್.ಡಿ.ಹೆಗಡೆ ಮಾತನಾಡಿ, ವಿಶ್ವಕರ್ಮನೇ ಏಕ ಮಾತ್ರ ಸೃಷ್ಟಿಕತೃ ಎಂಬುದಕ್ಕೆ ಅಧಾರಗಳಿವೆ. ಮಥುರಾ, ಲಂಕೆ, ಇಂದ್ರಪ್ರಸ್ಥ ನಗರಗಳ ನಿರ್ಮಾಣ ವಿಶ್ವಕರ್ಮನಿಂದಾಯಿತು. ದೇವತೆಗಳಿಗೆ ಆಯುಧ, ಅಲಂಕಾರ ವಸ್ತುಗಳನ್ನು ವಿಶ್ವಕರ್ಮನೇ ನೀಡಿರುವುದಾಗಿದೆ. ವಿಶ್ವಕರ್ಮ ಜನಾಂಗದ ಜನರು ಸಂಘಟಿತರಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಇದನ್ನೂ ಓದಿ :  ಧನ್ವಿತಾಗೆ ಕರಾವಳಿ ಕಾವಲು ಪಡೆಯಿಂದ ಸನ್ಮಾನ

ಜಿಲ್ಲಾ ಅಧ್ಯಕ್ಷ ಆನಂದ ಆಚಾರ್ಯ ಮಾತನಾಡಿ, ವಿಶ್ವಕರ್ಮ ಪರಂಪರೆಯು ಸತ್ಯಯುಗದಿಂದ ಈ ಕಲಿಯುಗದವರೆಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು ಅದರ ಭವ್ಯತೆಗೆ ಸಾಕ್ಷಿಯಾಗಿದೆ. ಇತ್ತೀಚಿಗೆ ಅಯೋಧ್ಯಾ ರಾಮ ಮಂದಿರ ನಿರ್ಮಾಣ ಮತ್ತು ಅಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ರಾಮನ ಭವ್ಯ ಮೂರ್ತಿಯೇ ಉದಾರಹರಣೆಯಾಗಿದೆ. ವಿಶ್ವಕರ್ಮರೂ ಸಂಘಟಿತರಾಗಿ ಮುನ್ನಡೆಯುವ ಅವಶ್ಯಕತೆ ಇದೆ ಎಂದರು.

ಇದನ್ನೂ ಓದಿ :  ಪಾಳುಬಿದ್ದ ಅಂಗನವಾಡಿ ಕಟ್ಟಡ ನವೀಕರಣ

ವಿಶ್ವಕರ್ಮ ಜಯಂತಿ (vishwakarma jayanti) ವೇದಿಕೆಯಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಆನಂದ ಜಿ. ಆಚಾರ್ಯ, ಶ್ರೀ ಇಡಗುಂಜಿ ಮಹಾಗಣಪತಿ ವಿಶ್ವಕರ್ಮ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಕೆ. ಆಚಾರ್ಯ, ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಧುಕರ ಆಚಾರ್ಯ, ಇಡಗುಂಜಿಯ ರಥ ಶಿಲ್ಪಿ ಗಂಗಾಧರ ಆಚಾರ್ಯ, ತಾಲೂಕ ವಿಶ್ವಕರ್ಮ ಅಭಿವೃದ್ಧಿ ಸಂಘದ ಅಧಕ್ಷ ಮಂಜುನಾಥ ಎಸ್‌. ಆಚಾರ್ಯ, ಸನಾತನ ವಾಸ್ತು ಶಾಸ್ತ್ರದ ವಿದ್ವಾನ್‌ ಮಾರುತಿ ಎಂ. ಆಚಾರ್ಯ, ಪ್ರಧಾನ ಕಾರ್ಯದರ್ಶಿ ಮಹೇಶ ಎಸ್‌. ಆಚಾರ್ಯ ಭಟ್ಕಳ, ಸಂಘಟನಾ ಕಾರ್ಯದರ್ಶಿ ಜಗದೀಶ ಆಚಾರ್ಯ ಮಂಕಿ ಹಾಗೂ ಎಲ್ಲಾ ವಿಶ್ವಕರ್ಮ ಸಮಾಜ ಭಾoಧವರು ಭಾಗವಹಿಸಿದ್ದರು. ಪುರೋಹಿತ ಮನೋಜ ಶರ್ಮಾ ಗುರುಮಠ ಕಟಪಾಡಿಯವರು ಶ್ರೀ ವಿಶ್ವಕರ್ಮ ಪೂಜೆ ನೇರವೇರಿಸಿ ಪ್ರಸಾದ ವಿತರಿಸಿದರು. ಮಾರುತಿ ಆಚಾರ್ಯ ವಂದಿಸಿ, ಸುದೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿಡಿಯೋ ಸಹಿತ ಇದನ್ನೂ ಓದಿ : BJP membership/ ಭಟ್ಕಳದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ