ಭಟ್ಕಳ (Bhatkal): ತಾಲೂಕಿನ ಚೌಥನಿಯ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಕನ್ಯಾ ಸಂಕ್ರಮಣದ ದಿನ ನಡೆಯುವ ವಿಶ್ವಕರ್ಮ ಪೂಜಾ ಮಹೋತ್ಸವವು (Vishwakarma Pooja) ಈ ವರ್ಷವೂ ಕೂಡ ಅತೀ ವಿಜೃಂಭಣೆಯಿಂದ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿಶ್ವಕರ್ಮ ಹೋಮ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ಕಾಳಿಕಾಂಬಾ ಮಹಿಳಾ ಸಂಘದವರಿಂದ ಲಲಿತ ಸಹಸ್ರನಾಮ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಪುರೋಹಿತರ ನೇತೃತ್ವದಲ್ಲಿ ಆಡಳಿತ ಮೊಕ್ತೇಸರ ಗಜಾನನ ಎನ್. ಆಚಾರ್ಯ ವೆಂಕಟಾಪುರ, ಎರಡನೇ ಆಡಳಿತ ಮೊಕ್ತೇಸರ ಗೋವಿಂದ ಎಮ್. ಆಚಾರ್ಯ ಕವೂರು, ಮೂರನೆಯ ಆಡಳಿತ ಮೊಕ್ತೇಸರ ಶಿವರಾಮ ಡಿ. ಆಚಾರ್ಯರ ಸಮ್ಮುಖದಲ್ಲಿ ಕಾರ್ಯಕ್ರಮ (Vishwakarma Pooja) ಜರುಗಿತು.
ಇದನ್ನೂ ಓದಿ : Palestine Sticker/ ಸಂಸದ ಕಾಗೇರಿ ಸೂಚನೆಗೆ ತಲೆಬಾಗಿದ ಪೊಲೀಸರು
ಶ್ರೀ ಕ್ಷೇತ್ರದ ಭೂದಾನ ಯೋಜನಾ ಸಮಿತಿ, ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘ, ಶ್ರೀ ಕಾಳಿಕಾಂಬಾ ಮಹಿಳಾ ಸಂಘ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯವರು ಉಪಸ್ಥಿತರಿದ್ದರು. ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು. ಅದೇ ದಿನ ಬೆಳಿಗ್ಗೆ ೯.೩೦ಕ್ಕೆ ವಿಶ್ವಕರ್ಮ ಪೂಜ್ಯೋತ್ಸವದ ಅಂಗವಾಗಿ ತಾಲೂಕಿನ ಗುರು ಸುಧೀಂದ್ರ ಕಾಲೇಜಿನ ಹತ್ತಿರದಿಂದ ಶ್ರೀ ಕಾಳಿಕಾಂಬಾ ದೇವಸ್ಥಾನದವರೆಗೆ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿವೀಕ್ಷಿಸಬಹುದು.
ಇದನ್ನೂ ಓದಿ : ಹೊನ್ನಾವರದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ