ಕುಮಟಾ (Kumta) : ಖ್ಯಾತ ಕ್ರಿಕೆಟ್ ಆಟಗಾರ (Cricketer) ವಿ ವಿ ಎಸ್ ಲಕ್ಷಣ (VVS Laxman) ಅವರು ಉತ್ತರ ಕನ್ನಡ ಜಿಲ್ಲೆ (Uttara Kannada) ಪ್ರವಾಸ ಕೈಗೊಂಡಿದ್ದಾರೆ. ಶ್ರೀ ಕ್ಷೇತ್ರ ಗೋಕರ್ಣಕ್ಕೆ (Gokarna) ಆಗಮಿಸಿದ ಅವರು, ಆತ್ಮಲಿಂಗ (Atmalinga) ದರ್ಶನ ಪಡೆದು ಪೂಜೆ ಸಲ್ಲಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಹಾಬಲೇಶ್ವರ (Mahabaleshwar) ದೇವಾಲಯದಲ್ಲಿ ಅವರು ((VVS Laxman) ಕುಟುಂಬದವರ ಜೊತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದಕ್ಕೂ ಮೊದಲು ಗಣಪತಿ ಮಂದಿರಕ್ಕೆ ತೆರಳಿ ಪೂಜೆ ಮಾಡಿದರು. ಆತ್ಮಲಿಂಗ ಪೂಜೆ ನಂತರ ದೇವಾಲಯದವರು ಅವರಿಗೆ ಪ್ರಸಾದ ವಿತರಿಸಿದರು. ಅರ್ಚಕ ಬದ್ರಿ ಅಡಿ ಪೂಜಾ ಕಾರ್ಯ ನೆರವೇರಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹೇಶ ಹಿರೇಗಂಗೆ ಉಪಸ್ಥಿತರಿದ್ದರು.
ಇದನ್ನೂ ಓದಿ : ರಕ್ತಸ್ರಾವದಿಂದ ಸರ್ವೆಯರ್ ಕೊನೆಯುಸಿರು