ಬೆಂಗಳೂರು : weather update/ ಕರ್ನಾಟಕ (Karnataka) ರಾಜ್ಯದಾದ್ಯಂತ ತೀವ್ರ ಚಳಿ ಮತ್ತು ಬಲವಾದ ಗಾಳಿ ಬೀಸುತ್ತಿದೆ. ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳಲ್ಲಿ ವಿಶೇಷವಾಗಿ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉತ್ತರ ಕನ್ನಡ (Uttara Kannada), ಬಾಗಲಕೋಟೆ, ಬೆಳಗಾವಿ(Belagavi), ಬೀದರ, ಧಾರವಾಡ(Dharwad), ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ (Shivamogga) ಮತ್ತು ವಿಜಯನಗರ ಸೇರಿದಂತೆ ಹಲವೆಡೆ ಶೀತಗಾಳಿ ಮತ್ತು ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : Nandini Milk/ ಫೆ. ೧ರಿಂದ ನಿಮ್ಮ ಮನೆಗೆ ನಂದಿನಿ ಹಾಲು ಬರೋದಿಲ್ಲ !
ಮತ್ತೊಂದೆಡೆ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ದಾಖಲಾದ ತಾಪಮಾನಗಳ ಪೈಕಿ ದಾವಣಗೆರೆಯಲ್ಲಿ ೧೧.೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರಿನಲ್ಲಿ (Bengaluru) ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಒಣ ಹವಾಮಾನ ಮತ್ತು ಕನಿಷ್ಠ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : Pallakki/ ಫೆ.೩ರಂದು ಶ್ರೀಧರ ಪದ್ಮಾವತಿ ದೇವಿ ಪಲ್ಲಕ್ಕಿ ಉತ್ಸವ
ಬೆಂಗಳೂರಿನ ವಿವಿಧೆಡೆ ತಾಪಮಾನ (weather update):
ಎಚ್‌ಎಎಲ್ (HAL): ಗರಿಷ್ಠ ೨೯.೩°ಸೆ., ಕನಿಷ್ಠ ೧೫.೧°ಸೆ.
ನಗರ: ಗರಿಷ್ಠ ೩೦.೫°ಸೆ., ಕನಿಷ್ಠ ೧೬.೪°ಸೆ.
ಕೆಐಎಎಲ್ (KIAL): ಗರಿಷ್ಠ ೩೦.೪°ಸೆ., ಕನಿಷ್ಠ ೧೫.೫°ಸೆ.
ಜಿಕೆವಿಕೆ (GKVK): ಗರಿಷ್ಠ ೨೯.೮°ಸೆ., ಕನಿಷ್ಠ ೧೫.೦°ಸೆ.
ಇದನ್ನೂ ಓದಿ : Calender/ ೨೦೦೨೫ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ
ಕರಾವಳಿ ಮತ್ತು ಇತರೆ ಪ್ರದೇಶಗಳಲ್ಲಿ ತಾಪಮಾನ:
ಹೊನ್ನಾವರ (Honnavar): ಗರಿಷ್ಠ ೩೩.೭°ಸೆ., ಕನಿಷ್ಠ ೨೦.೭°ಸೆ.
ಕಾರವಾರ (Karwar): ಗರಿಷ್ಠ ೩೪.೬°ಸೆ., ಕನಿಷ್ಠ ೨೦.೧°ಸೆ.
ಪಣಂಬೂರು (Panambur): ಗರಿಷ್ಠ ೩೨.೮°ಸೆ., ಕನಿಷ್ಠ ೨೧.೦°ಸೆ.
ಬೀದರ : ಗರಿಷ್ಠ ೩೨.೨°ಸೆ., ಕನಿಷ್ಠ ೧೬.೦°ಸೆ.
ವಿಜಯಪುರ : ಗರಿಷ್ಠ ೩೩.೪°ಸೆ., ಕನಿಷ್ಠ ೧೪.೫°ಸೆ.
ಬಾಗಲಕೋಟೆ: ಗರಿಷ್ಠ ೩೩.೭°ಸೆ., ಕನಿಷ್ಠ ೧೪.೪°ಸೆ.
ಇದನ್ನೂ ಓದಿ : Ginger growers / ಕಣ್ಣೀರು ಸುರಿಸುತ್ತಿರುವ ಶುಂಠಿ ಬೆಳೆಗಾರರು