ಭಟ್ಕಳ (Bhatkal) : ಏಪ್ರಿಲ್ ೧೨ ಮತ್ತು ೧೩ರಂದು ನಡೆಯವ ಕದಂಬೋತ್ಸವದ (Kadambotsav) ಅಂಗವಾಗಿ ಗುಡ್ನಾಪುರದಿಂದ ಆರಂಭವಾದ ಕದಂಬ ಜ್ಯೋತಿ (Kadamba Jyothi) ಹೊತ್ತ ರಥವು ಶಿವಮೊಗ್ಗ (Shivamogga) ಜಿಲ್ಲೆಯ ಸೊರಬ (Soraba) ಮತ್ತು ಸಾಗರ (Sagar) ಮೂಲಕ ಶುಕ್ರವಾರ ಭಟ್ಕಳಕ್ಕೆ ಆಗಮಿಸಿತ್ತು. ಇಲ್ಲಿನ ಸಂಶುದ್ದೀನ್ ವೃತ್ತದ ಬಳಿ ಕದಂಬ ಜ್ಯೋತಿ (Kadamba Jyothi) ಸ್ವಾಗತಿಸಿ ಬರಮಾಡಿಕೊಂಡ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ರಥಕ್ಕೆ ಪೂಜೆ ಸಲ್ಲಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕದಂಬ ಜ್ಯೋತಿ ರಥಯಾತ್ರೆಗೆ ಪೂಜೆ ಸಲ್ಲಿಸಿದ ತಹಸೀಲ್ದಾರ ರಥಯಾತ್ರೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ಸಮಾಜ ಕಲ್ಯಾಣ ಇಲಾಖೆಯ ಗೀತಾ ಹೆಗಡೆ, ಪುರಸಭೆ ವವ್ಯಸ್ಥಾಪಕ ವೆಂಕಟೇಶ ನಾಯ್ಕ, ತಹಸೀಲ್ದಾರ ಕಚೇರಿಯ ಶಿರಸ್ತೇದಾರ ಪ್ರವೀಣ, ತಾಲೂಕು ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ, ಅರಣ್ಯ ಇಲಾಖೆ ಸಿಬ್ಬಂದಿ, ತಹಸೀಲ್ದಾರ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ : hackathon / ಭಟ್ಕಳದಲ್ಲಿ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಸ್ಪರ್ಧೆಗೆ ಕ್ಷಣಗಣನೆ
ಗುಡ್ನಾಪುರದಿಂದ ಏಪ್ರಿಲ್ ೧೦ರಂದು ಆರಂಭವಾದ ಕದಂಬ ಜ್ಯೋತಿ ರಥಯಾತ್ರೆಯು ಹಾನಗಲ್, ಅಕ್ಕಿಆಲೂರು, ಸೊರಬ, ಸಾಗರ, ಕಾರ್ಗಲ್, ಹಾಡುವಳ್ಳಿ ಮಾರ್ಗವಾಗಿ ಸುಮಾರು ೩೮೦ ಕಿ.ಮೀ. ಸಂಚಾರ ಮಾಡಿ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಗಡಿಭಾಗವಾದ ಭಟ್ಕಳಕ್ಕೆ ಆಗಮಿಸಿತು. ಕದಂಬ ಜ್ಯೋತಿ ರಥಯಾತ್ರೆಯ ನಿಮಿತ್ತ ವಿಶೇಷ ವಾಹನವನ್ನು ಸುಂದರವಾಗಿ ತಯಾರಿಸಲಾಗಿದ್ದು, ಸಾರ್ವಜನಿಕರಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಕದಂಬ ಜ್ಯೋತಿ ರಥಯಾತ್ರೆಯು ಬಳಿಕ ಮುರ್ಡೇಶ್ವರ (Murdeshwar), ಇಡಗುಂಜಿ (Idagunji) ತೆರಳಿ, ಕುಮಟಾ (Kumta)ದಲ್ಲಿ ರಾತ್ರಿ ವಾಸ್ತವ್ಯ ಹೂಡಿತ್ತು. ಶನಿವಾರ ರಥಯಾತ್ರೆಯೂ ಬನವಾಸಿಗೆ (Banavasi) ತೆರಳಲಿದೆ.
ಇದನ್ನೂ ಓದಿ : FIR/ ಹಿಂದೂ ಕಾರ್ಯಕರ್ತರ ಮೇಲೆ ೨ ಪ್ರತ್ಯೇಕ ಎಫ್‌ಐಆರ್