ಭಟ್ಕಳ(Bhatkal) : ಸಾಧುಸಂತರು ಭಗವಂತನ ಪ್ರೇರಣೆಯಿಂದ ಧರ್ಮದ ಪ್ರಚಾರಕ್ಕಾಗಿ ಹುಟ್ಟಿಬಂದವರಾಗಿದ್ದಾರೆ. ಚಾತುರ್ಮಾಸ್ಯ (Chathurmasya) ನಡೆಯುವ ಸ್ಥಳದಲ್ಲಿ ಭಗವಂತನೇ ಸ್ವಯಂ ಇರುತ್ತಾನೆ ಎನ್ನುವ ನಂಬಿಕೆ ಇದೆ. ಎಲ್ಲರಿಗೂ ದೇವರನ್ನು ಕಾಣುವ ಅಭಿಲಾಷೆ ಇರುತ್ತದೆ. ಆದರೆ ಸಮುದ್ರದ ಅಲೆಗಳಂತೆ ಎದ್ದು ಬರುವ ಮಾಯೆಗಳು ಎಲ್ಲರನ್ನೂ ಬಂಧಿಸಿಡುತ್ತದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು (Brahmanand Shri) ಭಕ್ತರಿಗೆ ಆಶೀರ್ವಚನ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಶುಕ್ರವಾರ ತಮ್ಮ ಚಾತುರ್ಮಾಸ್ಯ ಸೀಮೋಲ್ಲಂಘನ (Seemollanghana) ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಗುರುಗಳ ಹಾಗೂ ದೇವರಲ್ಲಿ ಶರಣಾಗತಿ ಭಾವನೆ ಹೊಂದಿದವರು ಎಲ್ಲಾ ಕಲ್ಮಶಗಳನ್ನು ಕಳೆದುಕೊಂಡು ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanand Shri) ಹೇಳಿದರು.

ವಿಡಿಯೋ ಸಹಿತ ಇದನ್ನೂ ಓದಿ : chathurmasya end/ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸೀಮೋಲ್ಲಂಘನ ಯಶಸ್ವಿ

ಮೀನುಗಾರಿಕೆ, ಬಂದರು ಹಾಗೂ ಉತ್ತರ ಕನ್ನಡ ಜಿಲ್ಲಾ  ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಮಾತನಾಡಿ, ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮ ಭಟ್ಕಳದ ಇತಿಹಾಸದಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ಇದನ್ನು ಭಟ್ಕಳ ನಾಮಧಾರಿ ಸಮಾಜದಿಂದ ಮಾಡಿದ್ದೀರಿ. ಈ ಭಾಗದ ಶಾಸಕನಾಗಿ ನಿಮಗೆ ನಾನು ಅಭಾರಿಯಾಗಿದ್ದೇನೆ ಎಂದರು.

ಇದನ್ನೂ ಓದಿ : ನಾಲ್ವರು ಪತ್ರಕರ್ತರಿಗೆ ಟಾಗೋರ್‌ ಪ್ರಶಸ್ತಿ ಘೋಷಣೆ

ನನ್ನ ಆಸೆಯೊಂದು ಇತ್ತು. ಶ್ರೀಗಳ ೫ನೇ ವರ್ಷದ
ಚಾತುರ್ಮಾಸ್ಯ ಭಟ್ಕಳದಲ್ಲೇ ಮಾಡಬೇಕು ಎನ್ನುವ ಬೇಡಿಕೆ ಇಟ್ಟಾಗ ಶ್ರೀಗಳು ಈ ಬಾರಿ ಭಟ್ಕಳದಲ್ಲಿ ಮೌನ ಚಾತುರ್ಮಾಸ್ಯ ವ್ರತ ಮಾಡುತ್ತೇನೆ. ನಾನು ಜ್ಞಾನಕ್ಕೆ ಕುಳಿತುಕೊಳ್ಳುತ್ತೇನೆ. ನನ್ನ ಉದ್ದೇಶ ಜ್ಞಾನ ಮಾಡುವುದು ಎಂದು ಹೇಳಿದರು. ಆಗ ನಾನು ನಮ್ಮ ಭಾಗದ ಜನರು ದೇವರು ಹಾಗೂ ಗುರುಗಳನ್ನು ಸಮನಾಗಿ ಕಾಣುತ್ತಾರೆ. ಈ ಕಾರಣಕ್ಕಾಗಿ ನಿಮ್ಮ ಆಶೀರ್ವಾದ ಹಾಗೂ ಆಶೀರ್ವಚನ ನಮಗೆ ಅವಶ್ಯಕತೆ ಇದೆ. ನೀವು ಮೌನ ವ್ರತಾಚಾರಣೆ ಮಾಡಿದರೆ ನಮಗೆ ಸ್ವಲ್ಪ ನೋವುಂಟಾಗುತ್ತದೆ ಎಂದು ವಿನಂತಿ ಮಾಡಿಕೊಂಡೆ. ಅದರಂತೆ ಭಟ್ಕಳ ನಾಮಧಾರಿ ಸಮಾಜದವರು ಕೂಡ ಭೇಟಿ ನೀಡಿ ನಮಗೆ ನಿಮ್ಮ ಆಶೀರ್ವಚನ ಬೇಕು, ದಿನ ನಿತ್ಯ ನೀವು ವೇದಿಕೆ ಹಂಚಿಕೊಳ್ಳಬೇಕು. ನಾವು ನಿಮ್ಮೊಂದಿಗೆ ೪೧ ದಿನ ಒಳ್ಳೆಯ ಕಾರ್ಯಕ್ರಮವನ್ನು ಮಾಡುತ್ತೇವೆ ಎಂದು ಅವರೆಲ್ಲ ಕೇಳಿಕೊಂಡಂತೆ ಶ್ರೀಗಳ ಆಶೀರ್ವಾದದಂತೆ ಚಾತುರ್ಮಾಸ್ಯ ವ್ರತ ಮಾಡಲು ಯಶಸ್ವಿಯಾಗಿದ್ದೇವೆ. ಈ ಕಾರ್ಯಕ್ರಮದಲ್ಲಿ ಏನಾದರೂ ವ್ಯತ್ಯಾಸವಾದರೆ ಶ್ರೀಗಳ ಬಳಿ ಕ್ಷಮೆ ಕೇಳಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ : ಸೆ.೪ರಂದು ದೈವಜ್ಞ ಬ್ರಾಹ್ಮಣರ ಟಾಪರ್‌ಗಳಿಗೆ ವಿದ್ಯಾರ್ಥಿವೇತನ ವಿತರಣೆ

ಗುರು ಇದ್ದಲ್ಲಿ ದೇವರು ಇರುತ್ತಾರೆ ಎನ್ನುವುದಕ್ಕೆ ಈ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಹರಿದು ಬಂದ ಭಕ್ತರೇ ಸಾಕ್ಷಿ. ಮಠಕ್ಕೆ ಬಂದವರನ್ನು ಜಾತಿ ಭೇದ ಮರೆತು ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಸತ್ಕರಿಸಿ, ಈ  ಅದ್ಬುತ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಉಜಿರೆ ಶ್ರೀ ರಾಮ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ೨೫ ಕೋಟಿ ರೂ. ಕಟ್ಟಡಕ್ಕೆ ಸಹಕಾರ ನೀಡಿದ್ದೇನೆ. ಶ್ರೀಗಳ ಅಪೇಕ್ಷೆಯಂತೆ ಅಯೋಧ್ಯಾ ಹಾಗೂ ತಿರುಪತಿಯಲ್ಲಿ ನಿರ್ಮಾಣವಾಗಲಿರುವ ಶಾಖಾ ಮಠಕ್ಕೂ ಪೂರ್ಣ ಸಹಕಾರ ನೀಡುತ್ತೇನೆ ಎಂದು ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.

ಇದನ್ನೂ ಓದಿ : ಚರ್ಚ್‌ ಕಟ್ಟಡ ಪುನರ್‌ ನಿರ್ಮಾಣಕ್ಕೆ ಧನಸಹಾಯ

ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಮಾತನಾಡಿ, ಕನ್ಯಾಡಿ ಶ್ರೀಗಳು ಆಧುನಿಕ ಭಾರತದ ನಾರಾಯಣ ಗುರುಗಳಾಗಿದ್ದಾರೆ. ಜಾತಿ ಮತ ಬೇಧವಿಲ್ಲದೆ ಹಿಂದೂ ಧರ್ಮವನ್ನು ಸಂಘಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದರು.

ಇದನ್ನೂ ಓದಿ : ಕಾಸರಕೋಡ ಅಳಿವೆಯಲ್ಲಿ ಸಿಲುಕಿದ ಬೋಟ್

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಮಾಜಿ ಶಾಸಕ ಸುನೀಲ ನಾಯ್ಕ, ಉತ್ತರ ಭಾರತದಿಂದ ಆಗಮಿಸಿದ ಅಖಾಡ ಸಾಧುಗಳಾದ ವಿದ್ಯಾನಂದ ಮಹಾರಾಜ, ದೇವಾನಂದ ಸರಸ್ವತಿ ಮಹಾರಾಜ, ಇಂದ್ರಾನಂದ ಸರಸ್ವತಿ ಮಹಾರಾಜ, ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಶಿರಾಲಿ ನಾಮಧಾರಿ ಸಮಾಜದ ಅಧ್ಯಕ್ಷ ಆರ್.ಕೆ ನಾಯ್ಕ ಮಾತನಾಡಿದರು. ಸಾರದಹೊಳೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ, ಅಯೋಧ್ಯೆಯ ಕೇಶವಾನಂದ ಸ್ವಾಮೀಜಿ, ಉಡುಪಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ ವೇದಿಕೆಯಲ್ಲಿದ್ದರು.

ಇದನ್ನೂ ಓದಿ : ದುರ್ಗಪ್ಪ ಗುಡಿಗಾರ ಯಕ್ಷಗಾನ ಟ್ರಸ್ಟ್‌ ವಾರ್ಷಿಕೋತ್ಸವ

ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಸ್ವಾಗತಿಸಿದರು. ಸಂಚಾಲಕ ಕೃಷ್ಣ ನಾಯ್ಕ ಶಿರಾಲಿ ವಂದಿಸಿದರು. ಗಂಗಾಧರ ನಾಯ್ಕ, ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.  ಉತ್ತಕನ್ನಡ , ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯಿಂದ ನೂರಾರು ಬಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.