ಭಟ್ಕಳ: ವಿರುದ್ಧ ಪಥದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆ ಮತ್ತು ಎರಡು ವರ್ಷದ ಮಗು ಗಾಯಗೊಂಡ ಘಟನೆ (bike collision) ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬುಧವಾರ ರಾತ್ರಿ 8:15ರ ಸುಮಾರಿಗೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಭಟ್ಕಳ (Bhatkal) ತಾಲೂಕಿನ ಮಾವಿನಕಟ್ಟಾದ ಹೆದ್ದಾರಿ ಮನೆ ನಿವಾಸಿ ರಿಕ್ಷಾ ಚಾಲಕ ಶಿವರಾಜ ವೆಂಕಟೇಶ ದೇವಡಿಗ (೨೯) ಈ ಕುರಿತು ದೂರು ದಾಖಲಿಸಿದ್ದಾರೆ. ಸೆ ೨ರಂದು ಮಧ್ಯಾಹ್ನ ೧೨:೩೦ ಗಂಟೆಗೆ ರಾಷ್ಟ್ರೀಯ ಹೆದ್ದಾರಿ (National Highway)-೬೬ರ ಮಾವಿನಕಟ್ಟಾದ ಸಣ್ಣಭಾವಿ ಕ್ರಾಸ್ ಹತ್ತಿರ ಅಪಘಾತ (bike collision) ನಡೆದಿದೆ.

ಇದನ್ನು ಓದಿ: sports meet/ ಭಟ್ಕಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರೆನ್ನೆಸ್ ಸಾಧನೆ

ಭಟ್ಕಳ ಕಡೆಯಿಂದ ಹೊನ್ನಾವರ (Honnavar) ಕಡೆಗೆ ರಸ್ತೆಯ ವಿರುದ್ಧ ಪಥದಲ್ಲಿ ಚಲಾಯಿಸಿಕೊಂಡು ಬಂದ ಬೈಕ್ ರಸ್ತೆಯ ಬದಿಯ ಕಚ್ಚಾ ರಸ್ತೆಯಲ್ಲಿ  ನಿಂತುಕೊಂಡಿದ್ದ ಪಾದಾಚಾರಿ ಮಹಿಳೆ ಮತ್ತು ಮಗುವಿಗೆ ಡಿಕ್ಕಿ ಹೊಡೆದಿದೆ. ಹೆದ್ದಾರಿ ಮನೆಯ ಮಾಸ್ತಿ ನಾರಾಯಣ ದೇವಡಿಗ (೫೩) ಅವರ ಬಲಕಾಲಿಗೆ ಮತ್ತು ಎಡ ಕೈಗೆ ಗಾಯವಾಗಿದೆ. ಅವರ ಕೈಯಲ್ಲಿದ್ದ ಮಗು ಯಕ್ಷಿತ್ ಉದಯ ದೇವಡಿಗ(೨) ಈತನ ತಲೆಗೆ ಗಾಯಪಡಿಸಲಾಗಿದೆ.

ಇದನ್ನು ಓದಿ: Degree result/ ಪದವಿ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಉತ್ತಮ ಫಲಿತಾಂಶ

ಬೈಕ್ ಸವಾರ ಮಂಡಳ್ಳಿಯ ಪ್ರೇಮಾನಂದ ಸುಬ್ರಾಯ ದೇವಡಿಗ ವಿರುದ್ಧ ದೂರು ದಾಖಲಾಗಿದೆ (case filed). ಪ್ರಕರಣ ದಾಖಲಿಸಿಕೊಂಡ ಮುರುಡೇಶ್ವರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನು ಓದಿ: competition/ ಶಿಕ್ಷಕರಿಗೆ ಕವನ ರಚನೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ