ಭಟ್ಕಳ: ಒಲೆಯ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ೧೫ ದಿನಗಳ ನಂತರ ಮೃತಪಟ್ಟಿದ್ದಾರೆ (woman dies).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೇಂಗ್ರೆ-೦೧ರ ಉಳ್ಮಣ್ ನಿವಾಸಿ ಮಾಸ್ತಿ ಗಂಡ ಜಟ್ಟಯ್ಯ ದೇವಾಡಿಗ (೮೮) ಮೃತ ದುರ್ದೈವಿ. ಇವರು ದಿನಾಂಕ ೦೫-೦೧-೨೦೨೬ರಂದು ಸಾಯಂಕಾಲ ೪ ಗಂಟೆ ಸುಮಾರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮನೆಯ ಒಲೆಯ ಬೆಂಕಿ ತಾಗಿ, ಅವರ ಹೊಟ್ಟೆ, ಎದೆಗೆ, ಹಾಗೂ ಕುತ್ತಿಗೆಗೆ ಭಾರೀ ಗಾಯ ಆಗಿತ್ತು.
ವಿಡಿಯೋ ಸಹಿತ ಇದನ್ನು ಓದಿ: Video viral/ ಕಚೇರಿಯಲ್ಲೇ ಡಿಸಿಆರ್ಇ ಡಿಜಿಪಿ ರಾಮಚಂದ್ರ ರಾವ್
ಅವರನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ : ೧೯-೦೧-೨೦೨೬ ರಂದು ನಸುಕಿನ ಜಾವಗಂಟೆಗೆ ಮೃತಪಟ್ಟಿದ್ದಾರೆ (woman dies). ಈ ಕುರಿತು ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ವೃದ್ಧೆಯ ಮಗ ಗಣಪತಿ ತಂದೆ ಜಟ್ಟಯ್ಯ ದೇವಾಡಿಗ (೪೮) ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ: Bhatkal GSB/ ಭಟ್ಕಳ ಜಿ ಎಸ್ ಬಿ ವಾರ್ಷಿಕೋತ್ಸವ ಸಂಪನ್ನ



