ಭಟ್ಕಳ (Bhatkal) : ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬದವರು ಜಗಳವಾಡಿಕೊಂಡಿದ್ದಾರೆ (women fight). ರಸ್ತೆ ಮೇಲೆ ನೀರು ಹರಿಯುವ ವಿಷಯದಲ್ಲಿ ಆರಂಭಗೊಂಡ ಜಗಳ  ಹಲ್ಲೆ ನಡೆದು ಗಾಯವಾಗುವ ಮಟ್ಟಕ್ಕೆ ತಾರಕ್ಕೇರಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ತಲಾಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಸಂಗೀತಾ ನಟರಾಜ ನಾಯ್ಕ ಅವರು ನೆರೆಮನೆಯ ವಸಂತ ಮಾಸ್ತಪ್ಪ ನಾಯ್ಕ ಮತ್ತು ಅವರ ಪತ್ನಿ ರತ್ನಾ ವಸಂತ ನಾಯ್ಕ ವಿರುದ್ಧ ದೂರು ದಾಖಲಿಸಿದ್ದಾರೆ (women fight). ಆರೋಪಿತರ ಮನೆಯಲ್ಲಿ ಉಪಯೋಗಿಸಿದ ನೀರು ರಸ್ತೆಯ ಮೇಲೆ ಬಂದಿರುವುದನ್ನು ಗ್ರಾಮಸ್ಥರು ನೋಡಿ ಕೇಳಿದ್ದರು. ಇದರಿಂದ ರತ್ನಾ ನಾಯ್ಕ ಅವರು ಪಿರ್ಯಾದಿ ಸಂಗೀತಾ ನಾಯ್ಕರ ಗಂಡ ನಟರಾಜರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

ಇದನ್ನೂ ಓದಿ :  ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ

ರತ್ನಾ ನಾಯ್ಕ ಬೈದಿದ್ದಕ್ಕೆ ನಟರಾಜ ಅವರು ಪ್ರಶ್ನಿಸಿದ್ದಕ್ಕೆ ಊರಿನ ಗ್ರಾಮಸ್ಥರಿಗೆ ನಟರಾಜ ಹೇಳಿದ್ದನ್ನು ರತ್ನಾ ನಾಯ್ಕ ತಪ್ಪಾಗಿ ತಿಳಿದಿದ್ದಾರೆ. ನೀರು ರಸ್ತೆಯ ಮೇಲೆ ಹೋಗುತ್ತೆ, ನಿಮ್ಮ ತಲೆ ಮೇಲೆ ಏನೂ ಹೋಗುವುದಿಲ್ಲ. ನೀನು ಊರಿನವರ ಮುಂದೆ ನಮ್ಮ ಹೆಸರು ಹೇಳುತ್ತಿದ್ದೀಯಾ ಎಂದು ರತ್ನಾ ನಾಯ್ಕ ಅವರು ನಟರಾಜರ ಕುತ್ತಿಗೆಯನ್ನು ಹಿಡಿದಿದ್ದಾರೆ. ರತ್ನಾ ನಾಯ್ಕರ ಗಂಡ ವಸಂತ ನಾಯ್ಕ ಅಲ್ಲೇ ಬಿದ್ದಿದ್ದ ಕೆಂಪು ಕಲ್ಲನ್ನು ಕೈಯಲ್ಲಿ ಎತ್ತಿಕೊಂಡು ನಟರಾಜರ ತಲೆಗೆ ಹೊಡೆದು ರಕ್ತ ಬರುವಂತೆ ಗಾಯಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :   ಸಮುದ್ರದಲ್ಲಿ ಮುಳುಗಿ ಕಾರವಾರದ ವ್ಯಕ್ತಿ ಸಾವು