ಭಟ್ಕಳ (Bhatkal) : ವಿಶ್ವ ರಂಗಭೂಮಿ ದಿನ (World Theatre Day) ಅಂಗವಾಗಿ ತಾಲೂಕಿನ ಶ್ರೀ ಗುರು ರಂಗಭೂಮಿ ಜನಪದ ಹಾಗು ಸಾಂಸ್ಕೃತಿಕ ಕಲಾ ಸಂಘದಿಂದ ರಂಗಭೂಮಿ ಕಲಾವಿದರಾಗಿದ್ದ ಉದ್ಯಮಿ ಡಿ.ಕೆ.ಮೊಗೇರ (ದಾಮಣ್ಣ) ಅವರನ್ನು ಅವರ ಮನೆ ಅಂಗಳದಲ್ಲಿ ಗೌರವಿಸಲಾಯಿತು (honour to senior artist).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಸಂದರ್ಭದಲ್ಲಿ ಶ್ರೀ ಗುರು ರಂಗಭೂಮಿ ಹಾಗು ಸಾಂಸ್ಕೃತಿಕ ಕಲಾ ಸಂಘ ಉಪಾಧ್ಯಕ್ಷ ಎಸ್.ಎನ್. ದೇವಾಡಿಗ ಮಾತನಾಡಿ, ಡಿ.ಕೆ. ಮೊಗೇರರವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದರೂ ಪ್ರವೃತ್ತಿಯಲ್ಲಿ ಖ್ಯಾತ ರಂಗಭೂಮಿ ಕಲಾವಿದರಾಗಿದ್ದರು. ಎಲ್ಲರೂ ಪ್ರೀತಿಯಿಂದ ದಾಮು, ದಾಮಣ್ಣ ಎನ್ನುತ್ತಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ದಾಮಣ್ಣ ಮಾಡದ ನಾಟಕವೇ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಎಂದರು.

ಇದನ್ನೂ ಓದಿ : falling from train/ ರೈಲಿನಿಂದ ಬಿದ್ದ ಯುವಕ ೧೫ ಗಂಟೆಗಳ ನಂತರ ಪತ್ತೆ

ಸಂಘದ ಮಾಜಿ ಅಧ್ಯಕ್ಷ ಅಶೋಕ ಮಹಾಲೆ ಮಾತನಾಡಿ, ಪ್ರತಿ ವರ್ಷ ಸಂಕ್ರಾಂತಿಯ ಮಾರನೆಯ ದಿನ ಶೇಡಬರಿ ಜಾತ್ರೆಯ ಪ್ರಯುಕ್ತ ತೆಂಗಿನಗುಂಡಿಯಲ್ಲಿ ನಾಟಕ ನಡೆಯುತ್ತಿತ್ತು. ದಾಮಣ್ಣನ ನಾಟಕ ನೋಡಲೆಂದೇ ಜನ ಕಿಕ್ಕಿರಿದು ಸೇರುತ್ತಿದ್ದರು. ನಾಟಕದಲ್ಲಿ ಮಾಡುವ ಖಳನಾಯಕ ಪಾತ್ರ ಇಂದಿಗೂ ಜನಮಾನಸದ ಚಿತ್ರದಲ್ಲಿ ಅಳಿಸಲಾಗದ ಚಿತ್ತಾರದಂತಿದೆ ಎಂದರು. ಸಂಘದ ಸದಸ್ಯ ವೆಂಕಟೇಶ ನಾಯ್ಕ ತಲಗೋಡು ಮಾತನಾಡಿ, ದಾಮಣ್ಣನವರು ಭಟ್ಕಳದ ಶ್ರೀ ರಾಘವೇಂದ್ರ ಕಲಾಮಿತ್ರ ಮಂಡಳಿಯ ಸಂಸ್ಥಾಪಕರಾಗಿ  ೬೦ಕ್ಕೂ ಹೆಚ್ಚು ಸಾಮಾಜಿಕ ನಾಟಕಗಳಿಗೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದರು.

ಇದನ್ನೂ ಓದಿ : Protest Against DK Shivakumar/ ಡಿಕೆಶಿ ವಿರುದ್ಧ ಭಟ್ಕಳದಲ್ಲಿ ಪ್ರತಿಭಟನೆ

ಸಂಘದ ಇನ್ನೋರ್ವ ಸದಸ್ಯ ಶ್ರೀಧರ ನಾಯ್ಕ ಆಸರಕೇರಿ ಮಾತನಾಡಿ, ದಾಮಣ್ಣನವರು ರಂಗಭೂಮಿ ಕ್ಷೇತ್ರದಿಂದ ನಿವೃತ್ತರಾದರೂ ಇಂದಿಗೂ ರಂಗಭೂಮಿ ಕ್ಷೇತ್ರಕ್ಕೆ ಸಹಾಯ ಸಹಕಾರ ನೀಡುತ್ತಾ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರಿಗೆ ಕೆಲವು ದಿನದ ಹಿಂದೆ ಅನಾರೋಗ್ಯ ಕಾಡಿದರೂ ಭಗವಂತನ ಕೃಪೆ ಹಾಗೂ ಆಶೀವಾ೯ದದಿಂದ ಚೇತರಿಸಿಕೊಳ್ಳುತ್ತಿದ್ದಾರೆ  ಎಂದರು.  ಸಂಘದ ಮತ್ತೊಬ್ಬ ಸದಸ್ಯ, ಶಿಕ್ಷಕ ನಾರಾಯಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವ ನಾಯ್ಕ ವಂದನಾರ್ಪಣೆಗೈದರು. (World Theatre Day)

ಇದನ್ನೂ ಓದಿ : Honnavar port/ ಮುಂದಿನ ತಿಂಗಳು ಅಂತಿಮ ವಿಚಾರಣೆ