ಭಟ್ಕಳ: ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ, ಸಮಾಜದ ಸೇವಕ ಹಾಗೂ ನಾಮಧಾರಿ ಸಮಾಜದ ಮುಖಂಡರಾಗಿದ್ದ ದಿ ಎಲ್ ಎಸ್ ನಾಯ್ಕರವರ ಶ್ರದ್ಧಾಂಜಲಿ (Tribute) ಸಭೆ ನಾಮಧಾರಿ ಸಮಾಜದ ಗುರುಮಠದ ಸಭಾಭವನದಲ್ಲಿ ರವಿವಾರ ಬೆಳಿಗ್ಗೆ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಭೆಯಲ್ಲಿದ್ದ ಎಲ್ಲರೂ ಅವರ ಭಾವಚಿತ್ರಕ್ಕೆ ಪುಷ್ಪ ಹಾಕಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ (Tribute) ಅರ್ಪಿಸಿದರು. ಈ ಸಂದರ್ಭದಲ್ಲಿ ನಾಮಧಾರಿ ಅಭಿವೃದ್ದಿ ಸಂಘದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಎಲ್ ಎಸ್ ನಾಯ್ಕರವರ ಸಾವು ಇಡೀ ಸಮಾಜಕ್ಕೆ ನೋವು ತರುವಂತದ್ದು. ಅವರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಮಾಜ ಎಂದಿಗೂ ಇವರ ಸೇವೆಯನ್ನು ಸ್ಮರಿಸುತ್ತದೆ ಎಂದರು.
ಇದನ್ನು ಓದಿ: bike accident/ ಬೈಕ್ ಅಪಘಾತದಲ್ಲಿ ಒಬ್ಬ ಸಾವು
ಈ ಸಂದರ್ಭದಲ್ಲಿ ಪ್ರಮುಖರಾದ, ಸತೀಶಕುಮಾರ ನಾಯ್ಕ, ಗೋವಿಂದ ನಾಯ್ಕ, ಕೃಷ್ಣಾ ನಾಯ್ಕ, ಶಾಂತಾರಾಮ ನಾಯ್ಕ, ಶ್ರೀಧರ ನಾಯ್ಕ, ಪಾಂಡುರಂಗ ನಾಯ್ಕ , ಗಂಗಾಧರ ನಾಯ್ಕ, ವೆಂಕಟೇಶ ನಾಯ್ಕ ತಲಗೋಡು, ಗೋವರ್ಧನ ನಾಯ್ಕ ಮಾತನಾಡಿದರು. ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ ಕೆ ನಾಯ್ಕ, ಡಿ ಎಲ್ ನಾಯ್ಕ, ಕೆ ಆರ್ ನಾಯ್ಕ, ನಾಗೇಶ ನಾಯ್ಕ, ವಿಠ್ಠಲ ನಾಯ್ಕ, ಮಹೇಶ ನಾಯ್ಕ, ಎಸ್ ಎಂ ನಾಯ್ಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನು ಓದಿ: talent show/ ಕಲಾ ಸೌರಭ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ



