ಭಟ್ಕಳ (Bhatkal) : ಇಲ್ಲಿನ ಬಂದರ ರಸ್ತೆಯಲ್ಲಿರುವ ಶ್ರೀ ನಾಗಮಾಸ್ತಿ (Nagamasti) ದೇವಸ್ಥಾನದ ವರ್ಧಂತಿ (Vardhanti) ಉತ್ಸವ ನಿಮಿತ್ತ ಪ್ರತಿ ವರ್ಷ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿರುವ ಇಲ್ಲಿನ ಸರ್ಕಲ್ ಫ್ರೆಂಡ್ಸ್ರವರಿಂದ ಪ್ರಪ್ರಥಮ ಬಾರಿಗೆ ಪ್ರಸಿದ್ಧ ಕಲಾವಿದರ ತಂಡದವರಿಂದ ಯಕ್ಷಗಾನ (Yakshagana) ಪ್ರದರ್ಶನ ಆಯೋಜಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾ.೩ರಂದು ಶ್ರೀ ನಾಗಮಾಸ್ತಿ ದೇವರ ೧೫ನೇ ವರ್ಧಂತಿ ಉತ್ಸವ ನಿಮಿತ್ತ ರಾತ್ರಿ ೮.೩೦ಕ್ಕೆ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಇವರಿಂದ ಶ್ರೀ ಕೃಷ್ಣ ಪಾರಿಜಾತ ಮತ್ತು ಕನಕಾಂಗಿ ಕಲ್ಯಾಣ ಪ್ರಸಂಗಗಳ ಯಕ್ಷಗಾನ (Yakshagana) ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ ಬ್ರಹ್ಮೂರು, ಸಂತೋಷ ಕುಮಾರ ಆರ್ಡಿ ಆಗಮಿಸಲಿದ್ದಾರೆ. ಸಂಗೀತದಲ್ಲಿ ಪವನ್ ಆಚಾರ್ಯ ಹೇರಾಡಿ, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಹೆಗಡೆ ಮೂರೂರು ಹಾಗೂ ಸೀತಾರಾಮ ಭಂಡಾರಿ ಮತ್ತು ಚಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಹಾಗೂ ಮಂಗೇಶ ನಾಡಕರ್ಣಿ ಸಾಥ್ ನೀಡಲಿದ್ದಾರೆ.
ಇದನ್ನೂ ಓದಿ : young woman died/ ಬೈಕಿನಿಂದ ಬಿದ್ದು ಯುವತಿ ದುರ್ಮರಣ
ಸ್ತ್ರೀವೇಷದಲ್ಲಿ ಶಂಕರ ಹೆಗಡೆ ನೀಲ್ನೋಡು, ನಾಗರಾಜ ಭಟ್ ಕುಂಕಿಪಾಲ, ಶ್ರೀಕಾಂತ ರಟ್ಟಾಡಿ ಮತ್ತು ಪ್ರಥಮ ಆಚಾರಿ ಬಳಲೆ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಪಾತ್ರದಲ್ಲಿ ರಮೇಶ ಭಂಡಾರಿ ಮುರೂರು ಮತ್ತು ಪಾಂಡು ಪಟಗಾರ ಸಂಡಳ್ಳಿ ಮನರಂಜಿಸಲಿದ್ದಾರೆ. ಪುರುಷ ವೇಷದಲ್ಲಿ ವಿದ್ಯಾಧರ ರಾವ್ ಜಲವಳ್ಳಿ, ನಾಗರಾಜ ಭಂಡಾರಿ ಗುಣವಂತೆ, ರಾಜೇಶ ಭಂಡಾರಿ ಗುಣವಂತೆ, ಸನ್ವಯ ಭಟ್ ಮಳವಳ್ಳಿ, ಚಂದ್ರ ಮರಾಠಿ ಕಲವೆ, ಮಹೇಶ ಆಚಾರ್ಯ ನಾಕಳಿ, ವೆಂಕಟ್ರಮಣ ಭಟ್ ಕವಡಿಕೆರೆ, ರಾಮ ಪಟಗಾರ ಹಿಲ್ಲೂರು, ಗೌರೀಶ ನಾಯ್ಕ ಹೆಬೈಲ್, ಮಹೇಶ ಮರಾಠಿ, ಆದಿತ್ಯ ಕಲಾಲ್ ಮೊಗೆಬೆಟ್ಟು ಅಭಿನಯಿಸಲಿದ್ದಾರೆ.
ಇದನ್ನೂ ಓದಿ : precaution/ ಬಿಸಿಗಾಳಿ ಎದುರಿಸಲು ಮುನ್ನೆಚ್ಚರಿಕೆ ಕ್ರಮ ಇಲ್ಲಿದೆ…