ಹೊಳೆಹೊನ್ನೂರು : ಭದ್ರಾವತಿ (Bhadravati) ತಾಲೂಕಿನ ಆನವೇರಿಯಲ್ಲಿ ತಗಡಿನ ಶೆಡ್ ನಿರ್ಮಾಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಯುವಕ ಮೃತಪಟ್ಟಿದ್ದಾನೆ (young man died). ಸಮೀಪದ ಹನುಮಂತಾಪುರದ ರಕ್ಷಿತ್ (22) ಮೃತ ದುದೈರ್ವಿ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹನುಮಂತಾಪುರದ ರಕ್ಷಿತ್ ಆನವೇರಿಯ ಕೆ.ಕೆ. ರಸ್ತೆಯಲ್ಲಿ ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಮಿಲ್ಟ್ರೀ ಹೋಟೆಲ್ ಶೆಡ್ ನಿರ್ಮಾಸಿದ್ದಾನೆ. ಬುಧವಾರ ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ ೧೧ ಕೆ.ವಿ. ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ಯುವಕನನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲೇ ಯುವಕ ಸಾವನಪ್ಪಿದ್ದಾನೆ(young man died).

ಇದನ್ನೂ ಓದಿ : Meesho App / ಆನ್‌ಲೈನ್‌ ಶಾಪಿಂಗ್‌ನಲ್ಲಿ ೬೩ ಸಾವಿರ ರೂ. ವಂಚನೆ

ಹನುಮಂತಾಪುರದ ಲಲಿತಾಬಾಯಿ ಮತ್ತು ಕೃಷ್ಣೋಜಿರಾವ್ ದಂಪತಿಯ ಒಬ್ಬನೇ ಮಗ ರಕ್ಷಿತ್. ಚಿಕ್ಕಪ್ಪನ ಮಗನ ಸಹಭಾಗಿತ್ವದಲ್ಲಿ ಮಿಲ್ಟ್ರೀ ಹೋಟೆಲ್ ನಿರ್ಮಾಣದ ಕನಸು ಕಂಡಿದ್ದ. ಆನವೇರಿಯಲ್ಲಿ ಖಾಲಿ ಜಾಗವೊಂದನ್ನು ಗುತ್ತಿಗೆ ಪಡೆದು ತಗಡಿನ ಶೆಡ್ ನಿರ್ಮಾಣ ಮಾಡಿಕೊಂಡಿದ್ದ. ವಿದ್ಯುತ್ ಸಂಪರ್ಕ ಪಡೆಯುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ರಕ್ಷಿತ್‌ಗೆ ಒಬ್ಬಳು ತಂಗಿ ಇದ್ದಾಳೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಗೋಳು ಮುಗಿಲು ಮುಟ್ಟಿತ್ತು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ಇದನ್ನೂ ಓದಿ : ಐಸಿಎಸ್ಇ ಪಠ್ಯಪುಸ್ತಕದಲ್ಲಿ ಕವಿ ಶ್ರೀಧರ ಶೇಟ್‌ ಕವನ