ಕುಮಟಾ (Kumta) : ಮೋಟಾರ್‌ ಸೈಕಲ್‌ ಮೇಲಿಂದ ಬಿದ್ದು ಯುವತಿ ಮೃತಪಟ್ಟ (young woman died) ದಾರುಣ ಘಟನೆ ಕುಮಟಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಫೆ.೨ರಂದು ಬೆಳಿಗ್ಗೆ ೯.೪೦ರ ಸುಮಾರಿಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕುಮಟಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ(SKDRP) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕುಮಟಾ ತಾಲೂಕಿನ ಗುಂಡೇಅಂಗಡಿಯ ನಿವಾಸಿ, ಸುಮಾ ಲಕ್ಷ್ಮೀಶ ಮಡಿವಾಳ (೩೨) ಮೃತ ದುರ್ದೈವಿ. ಇವರು ತಮ್ಮ ಸಂಬಂಧಿ ಪ್ರಶಾಂತ ಗಣಪತಿ ಮಡಿವಾಳ ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್ಲಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ಗುಡೇಅಂಗಡಿ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದರು.

ಇದನ್ನೂ ಓದಿ : precaution/ ಬಿಸಿಗಾಳಿ ಎದುರಿಸಲು ಮುನ್ನೆಚ್ಚರಿಕೆ ಕ್ರಮ ಇಲ್ಲಿದೆ…

ಹೊಲನಗದ್ದೆಯ ಶ್ರೀ ನಾಗಶ್ರೀ ವಾಟರ್‌ ಸರ್ವಿಸಿಂಗ್‌ ಸೆಂಟರ್‌ ಹತ್ತಿರ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಸವಾರ ಪ್ರಶಾಂತ ಮಡಿವಾಳ ಒಮ್ಮೇಲೆ ಬ್ರೇಕ್‌ ಹಾಕಿದ್ದಾರೆ. ಪರಿಣಾಮ ಮೋಟಾರ್‌ ಸೈಕಲ್‌ ಮೇಲಿನಿಂದ ಜಾರಿ ರಸ್ತೆಯ ಮೇಲೆ ಬಿದ್ದ ಸುಮಾ ಮಡಿವಾಳ ಅವರ ತಲೆ ಮತ್ತು ಹಣೆಗೆ ಪೆಟ್ಟು ಬಿದ್ದು ಮೂಗಿನಿಂದ ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಅಂಬುಲೆನ್ಸ್‌ ಮೇಲೆ ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮೂರುಕಟ್ಟೆ ಹತ್ತಿರ ಯುವತಿ ಕೊನೆಯುಸಿರು ಎಳೆದಿದ್ದಾರೆ (young woman died) . ಈ ಕುರಿತು ಕುಮಟಾ ಪೊಲೀಸ್‌ ಠಾಣೆಯಲ್ಲಿ ಸವಾರ ಪ್ರಶಾಂತ ಮಡಿವಾಳ ವಿರುದ್ಧ ಅತಿ ವೇಗ ಮತ್ತು ಅಜಾಗರೂಕತೆ ಚಾಲನೆಯ ದೂರು (complaint) ದಾಖಲಾಗಿದೆ.

ಇದನ್ನೂ ಓದಿ : Education/ ಶಿಕ್ಷಣಕ್ಕಾಗಿ ೨ ಕೋಟಿ ರೂ. ವ್ಯಯ