ಶಿರಸಿ:ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದ ಯುವಕ ಕಾಲೇಜಿಗೆ ಹೋಗದೆ, ಮನೆಗೂ ಬಾರದೆ ಕಾಣೆಯಾಗಿರುವ(youth missing) ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಾನಗೋಡಿನ ಕಬ್ಬಳ್ಳಿ ಮೂಲದ ಮಂಜುನಾಥ ಹೆಗಡೆಯವರ ಮಗ ಸಾತ್ವಿಕ್ ಹೆಗಡೆ(೧೯) ಕಾಣೆಯಾದ ಯುವಕ(youth missing). ಶಿರಸಿ ನಗರದ ಆರ್ ಎನ್ ಶೆಟ್ಟಿ ಕಾಲೇಜು ವಿದ್ಯಾರ್ಥಿ ಸಾತ್ವಿಕ್ ಬೆಳಿಗ್ಗೆ ೧೦ ಗಂಟೆಗೆ ಕಾಲೇಜಿಗೆಂದು ಮನೆ ಬಿಟ್ಟಿದ್ದ. ಆದರೆ ಮರಳಿ ಮನೆಗೆ ಬಾರದ ಮಗನ ಸುಳಿವಿಗೆ ಸಾತ್ವಿಕ್ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಚಿಂತೆ ಬೇಡ, ಬೆಂಗಳೂರಿಗೆ ವಿಶೇಷ ರೈಲು ಸಂಚಾರ!
ಸಾತ್ವಿಕ್ ೫ ಅಡಿ ೩ ಇಂಚು ಎತ್ತರ, ಗೋದಿ ಮೈಬಣ್ಣ, ಹೊಂದಿದ್ದಾನೆ. ಬಿಳಿ ಬಣ್ಣದ ಕಪ್ಪು ಚುಕ್ಕೆ ಇರುವ ಟೀಶರ್ಟ ಹಾಗೂ ಬೂದು ಬಣ್ಣದ ಜೀನ್ಸ ಪ್ಯಾಂಟ್ ಧರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಶಿರಸಿ ಪೋಲೀಸ್ ಠಾಣೆಗೆ (ಮೊ.: ೯೪೮೦೮೦೫೨೬೪, ದೂ.: ೦೮೩೮೪-೨೨೬೨೬೦) ತಿಳಿಸುವಂತೆ ಕೋರಲಾಗಿದೆ.