ಭಟ್ಕಳ :ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋದ ಘಟನೆ ಭಟ್ಕಳದ ಬದ್ರಿಯಾ ಕಾಲೋನಿಯಲ್ಲಿ ನಡೆದಿದೆ.
ವಿಡಿಯೋ ನೋಡಿ : https://www.facebook.com/share/r/Xte2QMDZtAUQbMgV/?mibextid=oFDknk
ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಬಗ್ಗೆ ಮುಸ್ತಾಕ್ ಅಹ್ಮದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಗೆ ಮನೆಯಲ್ಲಿದ್ದ ವಸ್ತುಗಳು ಸುಟ್ಟುಹೋಗಿವೆ. ೫೦ ಸಾವಿರಕ್ಕೂ ಅಧಿಕ ಹಾನಿಯಾಗಿರುವ ಬಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕಾಲ್ನಡಿಗೆಯಲ್ಲೇ ಮನೆಗೆ ತೆರಳಿದ ಬೆಳಗಾವಿ ಮೇಯರ್!
ಕಾರ್ಯಾಚರಣೆಯಲ್ಲಿ ಕುಮಾರ ನಾಯ್ಕ, ನಾರಾಯಣ ಪಟಗಾರ, ಪುರುಸೊತ್ತಮ ನಾಯ್ಕ, ಅಕ್ಷಯ ಹಿರೇಮಠ ಭಾಗವಹಿಸಿದ್ದರು.
ಭಟ್ಕಳದಲ್ಲಿ ನಾಲ್ಕು ದಿನದ ಹಿಂದೆ ಒಂದೇ ದಿನ ಮನೆ ಮತ್ತು ಇಲೆಕ್ಟ್ರಿಕಲ್ ಬೈಕ್ ಗೆ ಬೆಂಕಿ ತಗುಲಿತ್ತು.
ವಿಡಿಯೋ ನೋಡಿ 👇👇👇 :
ಇಲೆಕ್ಟ್ರಿಕಲ್ ದ್ವಿಚಕ್ರ ವಾಹನಕ್ಕೆ ಬೆಂಕಿ https://www.facebook.com/share/v/JXbaX2yt1EC39ptX/?mibextid=oFDknk
ಪಾಳುಬಿದ್ದ ಮನೆಗೆ ಬೆಂಕಿ https://www.facebook.com/share/v/9pXm29v1hmqinPZf/?mibextid=oFDknk