ಧಾರವಾಡ : ತನ್ನ ಇಬ್ಬರು ಮಕ್ಕಳ ಹತ್ಯೆ ಮಾಡಿ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ : ಪತಿಯಿಂದಲೇ ಪತ್ನಿ-ಮಗುವಿಗೆ ವಿಷ: ಪತ್ನಿ ಸಾವು
ತಾಯಿ ಸಾವಿತ್ರಿ ಸರಕಾರ (32) ಎಂಬಾಕೆಯೇ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಮಕ್ಕಳಾದ ದರ್ಶನ್ (4) ಹಾಗೂ ಸುಮಾ (5) ಎಂಬಿಬ್ಬರನ್ನು ಕತ್ತು ಹಿಸುಕಿ ಕೊಳೆಗೈದಿದ್ದಾಳೆ.
ಈ ಘಟನೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಬೆಳಿಗ್ಗೆ ನವಲಗುಂದ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ. ತಾಯಿಯಿಂದಲೇ ಮಕ್ಕಳ ಹತ್ಯೆ ಪ್ರಕರಣದಿಂದ ಜನ ಬೆಚ್ಚಿಬಿದ್ದಿದ್ದಾರೆ. ಈ ಘಟನೆಯಿಂದ ಮೊರಬ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಈ ವಿಡಿಯೋ ನೋಡಿ : 29ರಿಂದ ಕಾಸ್ಮುಡಿ ಹನುಮಂತ ದೇವರ ಪ್ರತಿಷ್ಠೆ https://fb.watch/qqPvAN1S1S/?mibextid=Nif5oz