ಯಲ್ಲಾಪುರ : ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.೯೮.೪೮ ಫಲಿತಾಂಶ ಪಡೆದಿದೆ.
ಇದನ್ನೂ ಓದಿ : ವಿಶ್ವದರ್ಶನ ಪ್ರೌಢಶಾಲೆಗಳ ಉತ್ತಮ ಸಾಧನೆ; ಹರಿಪ್ರಕಾಶ ಕೋಣೆಮನೆ ಸಂತಸ
ಶಾಲೆಗೆ ಪ್ರಥಮ ಸ್ಥಾನ ಬಂದಿರುವ ಪ್ರಣತಿ ವಿ. ಮೆಣಸುಮನೆ ೬೨೫ಕ್ಕೆ ೬೨೦ ಅಂಕ ಗಳಿಸಿ ಶೇ.೯೯.೨೦ ಫಲಿತಾಂಶದೊಂದಿಗೆ ರಾಜ್ಯಕ್ಕೆ ೬ನೇ ಸ್ಥಾನ ಪಡೆದಿದ್ದಾಳೆ. ಸಿಂಚನ ಎಸ್. ಭಟ್ಟ ೬೧೫ ಅಂಕಗಳಿಸಿ ಶೇ.೯೮.೪೦ ಫಲಿತಾಂಶದೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ, ತೇಜಸ್ ಎಸ್. ಹೆಗಡೆ ೬೦೯ ಅಂಕಗಳಿಸಿ ಶೇ.೯೭.೪೪ ಫಲಿತಾಂಶದೊಂದಿಗೆ ತೃತೀಯ ಸ್ಥಾನ, ನಂದನ್ ಬಿ. ೬೦೩ ಅಂಕಗಳಿಸಿ ಶೇ.೯೬.೪೮ ಫಲಿತಾಂಶದೊಂದಿಗೆ ನಾಲ್ಕನೇ ಸ್ಥಾನ ಹಾಗೂ ಅಂಜನಾ ಭಟ್ಟ ಮತ್ತು ಕುಮಾರಿ ಅನುಜ್ಞಾ ಗಾಂವ್ಕರ್ ೬೦೧ ಅಂಕ ಗಳಿಸಿ ಶೇ.೯೬.೧೬ ಫಲಿತಾಂಶದೊಂದಿಗೆ ಐದನೇ ಸ್ಥಾನ ಗಳಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪರೀಕ್ಷೆಗೆ ಹಾಜರಾದ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಟ್ಟೂ ೬೬ ವಿದ್ಯಾರ್ಥಿಗಳಲ್ಲಿ ೩೩ ಡಿಸ್ಟಿಂಕ್ಷನ್ ನಲ್ಲಿ, ೨೮ ವಿದ್ಯಾರ್ಥಿಗಳು ಪ್ರಥಮ ದರ್ಜೆ, ೪ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.