ಹೊನ್ನಾವರ : ಅಖಿಲ ಭಾರತ ವಿಶೇಷ ಚೇತನರ ಫಿಡೆ ರೇಟೆಡ್ ಚಾಂಪಿಯನ್‌ಶಿಪ್-೨೦೨೪ರಲ್ಲಿ ಹೊನ್ನಾವರದ ಸಮರ್ಥ ಜೆ.ರಾವ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ವಿಶೇಷ ಚೇತನರ ಚೆಸ್ ಫೆಡರೇಶನ್ ಆಶ್ರಯದಲ್ಲಿ ಜೂನ್ ೨೪ರಿಂದ ೨೮ರವರೆಗೆ ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ಈ ಪಂದ್ಯಾವಳಿ ನಡೆದಿತ್ತು. ಜೆ ಆರ್ ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಟಾಟಾ ಸ್ಟೀಲ್ ೪ನೇ ಅಖಿಲ ಭಾರತ ವಿಶೇಷ ಚೇತನರ ಪಿಡೇ ರೇಟೆಡ್ ಚೆಸ್ ಚಾಂಪಿಯನ್‌ಶಿಪ್ ನಡೆದಿತ್ತು. ಮುಕ್ತ ವಿಭಾಗದ ೯ ಸುತ್ತುಗಳಲ್ಲಿ ೭.೫ ಅಂಕಗಳನ್ನು ಗಳಿಸಿ ಹೊನ್ನಾವರದ ಸಮರ್ಥ ಪ್ರಥಮ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : ಓಮ್ನಿ – ಟೂರಿಸ್ಟ್ ಬಸ್ ನಡುವೆ ಡಿಕ್ಕಿ; ಭಟ್ಕಳದ ವ್ಯಕ್ತಿ ಸಾವು