ಭಟ್ಕಳ: ತಾಲೂಕಿನ ಸರ್ಪನಕಟ್ಟೆಯ ಮೊಬೈಲ್ ಅಂಗಡಿಯಲ್ಲಿ ೨೦೧೬ರಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿ, ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಅಡಗಿದ್ದವನನ್ನು (absconding accused)ಭಟ್ಕಳ ಗ್ರಾಮೀಣ ಪೊಲೀಸರು (Bhatkal Rural Police) ಪತ್ತೆಹಚ್ಚಿ ಬಂಧಿಸಿದ್ದಾರೆ (arrested).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರಾಯಚೂರು (Raichur) ಜಿಲ್ಲೆಯ ನಾಗರಾಜ್ ನಾರಾಯಣ ನಾಯ್ಕ (೩೫) ಹಾಲಿ ಉಡುಪಿ (Udupi) ಜಿಲ್ಲೆಯ ಬೈಂದೂರಿನಲ್ಲಿ (Byndoor) ವಾಸವಾಗಿದ್ದು, ೨೦೨೧ರಿಂದ ನಿರಂತರವಾಗಿ ನ್ಯಾಯಾಲಯದ ವಾರೆಂಟ್ನಿಂದ ತಪ್ಪಿಸಿಕೊಂಡಿದ್ದ (absconding accused). ಆಗಸ್ಟ್ ೯ರಂದು ಕೊಪ್ಪಳ (Koppal) ಜಿಲ್ಲೆಯ ಕಾರಟಗಿ (Karatagi) ತಾಲೂಕಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಇದನ್ನೂ ಓದಿ: Ganja seized/ ಭಟ್ಕಳದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶ
ಡಿವೈಎಸ್ಪಿ ಮಹೇಶ್ ಕೆ, ಸಿಪಿಐ ಮಂಜುನಾಥ ಎ ಲಿಂಗಾರೆಡ್ಡಿ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣಾ ಸಿಬ್ಬಂದಿ ಲೋಕೇಶ ನಾಯ್ಕ, ಅರುಣ ನಾಯ್ಕ ಕಾರ್ಯಾಚರಣೆ ನಡೆಸಿದ್ದರು. ಬಂಧಿತನನ್ನು ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿದೆ. ಬಂಧನ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇಬ್ಬರು ಸಿಬ್ಬಂದಿಗೆ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ಲಭಿಸಿದೆ.
ಇದನ್ನೂ ಓದಿ: Ex Servicemen/ ಭಟ್ಕಳ ಲೈಟ್ಹೌಸ್ನಲ್ಲಿ ಸ್ಥಳೀಯರಿಗಿಲ್ಲ ಆದ್ಯತೆ



