ಭಟ್ಕಳ: ಶಿರಾಲಿಯ ವೈದ್ಯ ಮತ್ತು ಸಾಹಿತ್ಯ- ಸಾಂಸ್ಕೃತಿಕ ರಾಯಭಾರಿಯಾಗಿದ್ದ ಡಾ ಆರ್ ವಿ ಸರಾಫರ (Dr R V Saraf) ಮಿತ್ರವರ್ಗ ಮತ್ತು ಕುಟುಂಬದವರು ಉದಾರ ದಾನಿಗಳಿಂದ ಸಂಗ್ರಹಿಸಿದ ೨೫೦೦೦೦ ರೂಪಾಯಿಗಳ ದೇಣಿಗೆಯನ್ನು (Donation) ಜನತಾ ವಿದ್ಯಾಲಯಕ್ಕೆ ನೀಡುವುದರ ಮೂಲಕ ಡಾ ಆರ್ ವಿ ಸರಾಫ ಅವರಿಗೆ ಶ್ರದ್ಧಾಂಜಲಿ (Tribute) ಅರ್ಪಿಸಿದರು. ಡಾ ಆರ್ ವಿ ಸರಾಫರ ನಿಧನದ ನಿಮಿತ್ತ ಶಿರಾಲಿಯ ಪೇಟೆ ಹನುಮಂತ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆ ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಯಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜಿಎಸ್‌ಬಿ ಸಮಾಜದವರು ಏರ್ಪಡಿಸಿದ್ದ ಈ ಸಂತಾಪ ಸೂಚಕ ಸಭೆಯಲ್ಲಿ ಬೇರೆ ಬೇರೆ ಸಮಾಜದ ಗಣ್ಯರು ಆಗಮಿಸಿ ಡಾ ಸರಾಫರವರ ವ್ಯಕ್ತಿತ್ವಕ್ಕೆ ನುಡಿ ನಮನ (Tribute) ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ ಸರಾಫರವರ ಮಗ ಪರೇಶ್ ಸರಾಫ ಮಾತನಾಡಿ, ತಂದೆಯ ವೈದ್ಯಕೀಯ, ಸಮಾಜ ಸೇವೆ, ಸಾಹಿತ್ಯ ಸೇವೆ ಇತ್ಯಾದಿ ಸೇವೆಗಳಿಂದಾಗಿ ಅವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬಾಳಿ ಬದುಕಿದರು. ಅವರ ಬದುಕನ್ನು ಒಂದು ಆಚರಣೆಯನ್ನಾಗಿ ಮಾಡಬೇಕೆಂದು ಬಯಸುತ್ತೇನೆ ಎಂದು ಹೇಳಿದರು. ತನ್ನ ಮತ್ತು ತಂದೆಯ ಒಡನಾಟವನ್ನು ಚುಟುಕುಗಳ ರೂಪದಲ್ಲಿ ವ್ಯಕ್ತಪಡಿಸಿದರು. ಸರಾಫರವರ ಸಾಧನೆಯ ಹಿಂದೆ ತಮ್ಮ ತಾಯಿ ದಿವಂಗತ ರೇಖಾ ಸರಾಫ ಅವರ ನಿಸ್ವಾರ್ಥ ಬದುಕನ್ನು ಅವರು ನೆನಪಿಸಿಕೊಂಡರು. ತಮ್ಮ ಕುಟುಂಬಕ್ಕೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಂಡರು.
Dr Ramesh Saraf/ ಅಗಲಿದ ಭಟ್ಕಳದ ಸಾಹಿತ್ಯಕ, ಸಾಂಸ್ಕೃತಿಕ ಮನಸ್ಸು
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾಹಿತಿ ಮತ್ತು ಶಿಕ್ಷಕ ಶ್ರೀಧರ ಶೇಟ್ ಶಿರಾಲಿ, ಡಾ ಆರ್ ವಿ ಸರಾಫರವರ ಸಂಪೂರ್ಣ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟರು. ಅವರು ಬಡಜನರ ವೈದ್ಯರಾಗಿದ್ದಷ್ಷೇ ಅಲ್ಲದೆ ಸೃಜನಶೀಲ ಸಾಹಿತಿಗಳು, ಪತ್ರಕರ್ತರು, ಸಂಪಾದಕರು, ಬೇಸಿಗೆ ಶಿಬಿರದ ಸಂಘಟಕರು, ಶ್ರೀ ಮಾರುತಿ ಮಕ್ಕಳ ಯಕ್ಷಗಾನ ಮೇಳದ ಸಂಘಟಕರು, ಜನತಾ ವಿದ್ಯಾಲಯ ಪೂರ್ವ ವಿದ್ಯಾರ್ಥಿಗಳ ಪರಿವಾರದ ಅಧ್ಯಕ್ಷರು, ತಾಲೂಕ ಕಸಾಪ ಅಧ್ಯಕ್ಷರು, ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು, ನವೋದಯ ತರಬೇತಿಯ ಸಂಘಟಕರು, ಮಾಸ್ತಿಕಟ್ಟೆ ಪುನರ್ ಪ್ರತಿಷ್ಠಾಪನ ಮಹೋತ್ಸವ ಸಮಿತಿಯ ಅಧ್ಯಕ್ಷರು, ಭಟ್ಕಳದ ಲಯನ್ಸ್ ಕ್ಲಬ್ ನ ಸಂಸ್ಥಾಪಕರು, ಆಜಾದ್ ಓಪನ್ ಸ್ಕೌಟ್ ಗ್ರೂಪಿನ ಸ್ಥಾಪಕರು ಹೀಗೆ ಬಹುಮುಖ ಪ್ರತಿಭೆಯ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ಹೇಳಿದರು.
Doctor Mama/ ‘ಡಾಕ್ಟರ್ ಮಾಮ’ ಎಂದು ಇನ್ನು ಯಾರನ್ನು ಕರೆಯಲಿ?
ಶಿರಾಲಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ತಮ್ಮ ಸಹೋದರ ಕೆ ಎನ್ ನಾಯ್ಕರ ಅನಾರೋಗ್ಯದ ಸಮಯದಲ್ಲಿ ಡಾ ಸರಾಫರವರು ನೀಡಿದ ಸೇವೆಯನ್ನು ತಮ್ಮ ಕುಟುಂಬ ಖಂಡಿತ ಮರೆಯಲಾರದು. ಅವರು ಎಲ್ಲಾ ಸಮಾಜಕ್ಕೆ ಸೇರಿದ ಧೀಮಂತ ವ್ಯಕ್ತಿಯಾಗಿದ್ದರು ಎಂದು ನುಡಿದರು.
Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಅಭಿಮಾನಿಗಳಲ್ಲಿ ಅಸಮಾಧಾನ
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ ಆರ್ ನಾಯ್ಕ ಮಾತನಾಡಿ, ತಮ್ಮ ಮತ್ತು ಸರಾಫ ಡಾಕ್ಟರ್ ರವರ ಒಡನಾಟವನ್ನು ಬಣ್ಣಿಸಿದರು. ಮುರುಡೇಶ್ವರದ ಆರ್ ಎನ್ ಎಸ್ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಚೇತನ್ ಕಲ್ಕೂರ ಮಾತನಾಡಿ, ತನ್ನ ಮೇಲೆ ಡಾ ಸರಾಫರವರು ಬೀರಿದ ಪ್ರಭಾವವನ್ನು ನೆನಪಿಸಿಕೊಂಡರು. ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಸಾಹಿತ್ಯ ಪರಿಷತ್ತಿಗೆ ಡಾಕ್ಟರ್ ಸರಾಫರವರು ನೀಡಿದ ಸೇವೆಯನ್ನು ಕೊಂಡಾಡಿದರು. ಅವರ ಹೆಸರನ್ನು ಚಿರಸ್ಥಾಯಿಯಾಗಿ ಮಾಡುವುದಕ್ಕಾಗಿ ವರ್ಷಕ್ಕೊಮ್ಮೆ ಡಾ. ಸರಾಫ್ ರವರ ನೆನಪಿನಲ್ಲಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದರು.
Murinakatte/ ಮುರಿನಕಟ್ಟೆ ಸ್ಥಳದಲ್ಲಿ ರಸ್ತೆ ಕಾಮಗಾರಿ: ಬಿಗು ಬಂದೋಬಸ್ತ್
ಶಿರಾಲಿ ಜಿಎಸ್‌ಬಿ (GSB) ಸಮಾಜದ ಅಧ್ಯಕ್ಷ ಅಶೋಕ ಪೈ ಸ್ವಾಗತಿಸಿ, ತಮ್ಮ ಮತ್ತು ಡಾ ಸರಾಫರವರ ಆತ್ಮೀಯ ಸಂಬಂಧ ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ವೈದ್ಯರಾದ ಡಾ ವಿವೇಕ ದೇವಿದಾಸ ಮಹಾಲೆ, ಡಾ ಅನಂತ ಕಾಮತ, ಜನತಾ ವಿದ್ಯಾಲಯದ ಪ್ರಾಂಶುಪಾಲ ಜಿ ಎಸ್ ಭಟ್, ಉದ್ಯಮಿ ವಿಜಯ ಹೇರಂಭ ಹೆಗಡೆಯವರು ಡಾ ಸರಾಫರವರ ಬಗ್ಗೆ ಮಾತನಾಡಿದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.
Dirty water/ ತೆರೆದ ಚರಂಡಿಯಲ್ಲಿ ಗಲೀಜು ನೀರು: ಮಾರುತಿ ನಗರದಲ್ಲಿ ಅವ್ಯವಸ್ಥೆ
ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಲೀಲಾವತಿ ಮೊಗೇರ ಮತ್ತಿತರರು ಮಾತನಾಡಿದರು. ಡಾ ಸರಾಫರವರ ಪುತ್ರಿ ಸ್ನೇಹಲತಾ, ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. ಎಲ್ಲರಿಗೂ ಮಿತ್ರ ಭೋಜನ ಏರ್ಪಡಿಸಲಾಗಿತ್ತು.



