ಭಟ್ಕಳ: Followup/ ಇನ್ನೆರಡು ತಿಂಗಳಲ್ಲಿ ಅವರ ಮನೆಯಲ್ಲಿ ಮದುವೆ. ಅದಕ್ಕೆಂದೇ ಸಿದ್ಧತೆ ಮಾಡಿಕೊಳ್ಳುತ್ತ ಸಂಭ್ರಮದಲ್ಲಿರುವಾಗಲೇ ಸೂತಕದ ಛಾಯೆ ಆವರಿಸಿದೆ. ಪತ್ನಿ ಜೊತೆ ದೇವಸ್ಥಾನಕ್ಕೆಂದು ಹೋದವ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಕಣ್ಣೆದುರೇ ಪತಿಯ ದುರ್ಮರಣ ನೋಡಿದ ಹೆಂಡತಿಯ ಕಂಗಳಲ್ಲೀಗ ನೀರಿಲ್ಲ. ಮಾತುಗಳಿಗೆ ಧ್ವನಿಯಿಲ್ಲ. ಎಲ್ಲವೂ ಶೂನ್ಯ. ಮನೆಯ ಮಗಳನ್ನು ಧಾರೆಯೆರೆಯಬೇಕಾಗಿದ್ದ ತಂದೆಯೇ ಲೋಕಕ್ಕೆ ವಿದಾಯ ಹೇಳಿದ ಅಶುಭ ದಿನವದು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬರುವ ನವೆಂಬರ್‌ ತಿಂಗಳಲ್ಲಿ ಕರಿಕಲ್‌ ಮೂಲದ ಈಶ್ವರ ಮಂಜಪ್ಪ ನಾಯ್ಕ ತಮ್ಮ ಮಗಳ ಮದುವೆ ನಿಶ್ಚಯಿಸಿದ್ದರು. ಅದಕ್ಕಾಗಿ ಸಿದ್ಧತೆಯಲ್ಲೂ ತೊಡಗಿಕೊಂಡಿದ್ದರು. ಆ ೨೩ರಂದು ಶನಿವಾರ ದೇವಸ್ಥಾನಕ್ಕೆಂದು ತೆರಳಿದ್ದರು. ಹಾಲಿ ಮುರ್ಡೇಶ್ವರದ ಬಸ್ತಿ ಬಳಿಯ ದೇವಿಕಾನ್‌ದಲ್ಲಿ ವಾಸ್ತವ್ಯ ಹೂಡಿದ್ದ ಈಶ್ವರ ನಾಯ್ಕ ಅವರು, ದೇವಸ್ಥಾನಕ್ಕೆ ತಮ್ಮ ಹೆಂಡತಿ ಭಾರತಿಯೊಂದಿಗೆ ಹೋಗುತ್ತಿದ್ದವರು ಗೋವಿಂದನ ಪಾದ ಸೇರುವಂತಾಗಿದೆ.  ಪತ್ನಿ ಗಂಭೀರ ಗಾಯಗೊಂಡಿದ್ದರಿಂದ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು.

ಇದನ್ನೂ ಓದಿ: Bhatkal police arrest/ ಮೂವರು ಯುವಕರನ್ನು ಜೈಲಿಗಟ್ಟಿದ ಭಟ್ಕಳದ ಪೊಲೀಸರು 

ಭಟ್ಕಳದ ಸಂಶುದ್ದೀನ್‌ ವೃತ್ತದ ಕಡೆಯಿಂದ ಕುಂದಾಪುರದ (Kundapura) ಕಡೆಗೆ ಹೊರಟಿದ್ದ ಟ್ಯಾಂಕರೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಬೈಕ್‌ ಸವಾರ ಈಶ್ವರ ನಾಯ್ಕ ಹೆಲ್ಮೆಟ್‌ ಧರಿಸಿದ್ದರೂ ಟ್ಯಾಂಕರ್‌ ತಲೆ ಮೇಲೆ ಹರಿದು ಛಿದ್ರಗೊಂಡಿದೆ. ಈ ದುರ್ಘಟನೆಗೆ ದುರಸ್ತಿ ಕಾಣದ, ಅಸ್ತವ್ಯಸ್ತ ಹೆದ್ದಾರಿ ಹೊಂಡಗಳೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಸದ್ಯ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed). ಟ್ಯಾಂಕರ್‌ ಮತ್ತು ಬೈಕ್‌ ಪೊಲೀಸರ ವಶದಲ್ಲಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

(Followup)

ಇದನ್ನೂ ಓದಿ: Dakke Kunita/ ದುಬೈಗೆ ತೆರಳಲಿದೆ ಭಟ್ಕಳದ ಡಕ್ಕೆ ಕುಣಿತ