ಭಟ್ಕಳ: ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಆ 30ರಂದು ಭಟ್ಕಳ (bhatkal) ಹಳೆಯ ಬಸ್ ನಿಲ್ದಾಣ ಸಮೀಪ ಸಾವನ್ನಪ್ಪಿದ ಭಿಕ್ಷುಕನ ಮೃತದೇಹವನ್ನು ರುದ್ರಭೂಮಿಯಲ್ಲಿ ಸಮಾಜ ಸೇವಕ ಮಂಜು ಮುಟ್ಟಳ್ಳಿ , ಇಸ್ಮಾಯಿಲ್ ಸವುದ್ ಗವಾಯಿ ಹಾಗೂ ಆಂಬ್ಯುಲೆನ್ಸ್ ಚಾಲಕ ಏವರೆಟ್ಸ್, ಪುರಸಭೆ ಪೌರ ಕಾರ್ಮಿಕರ ಸಹಾಯದಿಂದ ಪೊಲೀಸ ಸಿಬ್ಬಂದಿ ಸಮ್ಮುಖದಲ್ಲಿ ಅಂತ್ಯಸಂಸ್ಕಾರ (Cremation) ನಡೆಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ವ್ಯಕ್ತಿ ಕಳೆದ ಕೆಲವು ತಿಂಗಳಿಂದ ಹಳೆಯ ಬಸ್ ನಿಲ್ದಾಣದ ಮೀನು ಮಾರುಕಟ್ಟೆ ಪಕ್ಕದಲ್ಲಿ ಚಿಂದಿ ಆಯುತ್ತಾ ವಾಸವಾಗಿದ್ದನು. ಅನಾರೋಗ್ಯದ ಹಿನ್ನೆಲೆಯಲ್ಲಿ ಅಂಗಡಿ ಮುಂಭಾಗದಲ್ಲಿ ಕುಳಿತ ಸ್ಥಿತಿಯಲ್ಲೇ ಕೊನೆಯುಸಿರೆಳೆದಿದ್ದನು.

ಇದನ್ನು ಓದಿ: Prize distribution/ ಶಿಕ್ಷಕರಿಗೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ  ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಬಳಿಕ ವಿಷಯ ತಿಳಿದು ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಆಂಬ್ಯುಲೆನ್ಸ್ ಚಾಲಕ ವಿನಾಯಕ ನಾಯ್ಕ ಹಾಗೂ ನಗರ ಪೊಲೀಸ್ ಠಾಣೆಯ ಎಎಸ್ಐ ರಾಜೇಶ ನಾಯ್ಕ ಅವರ ಸಹಕಾರದಿಂದ ಮೃತ ದೇಹವನ್ನು ಅಲ್ಲಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಭಟ್ಕಳ ನಗರ ಠಾಣೆಯಲ್ಲಿ ಸಮಾಜ ಸೇವಕರಾದ ಮಂಜು ಮುಟ್ಟಳ್ಳಿ ಈ ಕುರಿತು ಪ್ರಕರಣ ದಾಖಲು ಮಾಡಿದ್ದರು.

ಇದನ್ನು ಓದಿ: Versatile teacher/ ಬಹುಮುಖ ಪ್ರತಿಭೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿಗೆ ಒಲಿದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ನಂತರ ಪೊಲೀಸರು ಅಪರಿಚಿತ ಶವದ ವಾರಸುದಾರರನ್ನು ಪತ್ತೆ ಮಾಡುವ ಕಾರ್ಯ ನಡೆಸಿದ್ದರು. ಮೃತನ ಕುರಿತು ಯಾವುದೇ ಮಾಹಿತಿ ತಿಳಿದವರು ತಕ್ಷಣವೇ ಭಟ್ಕಳ ನಗರ ಪೊಲೀಸ್ ಠಾಣೆ (ದೂ.ಸಂ: 08385–226333) ಅಥವಾ ಮೊಬೈಲ್ ಸಂಖ್ಯೆ 9480805269ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು

ಇದನ್ನು ಓದಿ: Insult’ to journalist/ ಪತ್ರಕರ್ತೆಗೆ ‘ಅವಮಾನ’ – ದೇಶಪಾಂಡೆ ಕ್ಷಮೆಯಾಚಿಸಲಿ: ಶಿವಾನಿ ಶಾಂತಾರಾಮ

ಆದರೆ ಸೆಪ್ಟೆಂಬರ 6ರ ತನಕ ವಾರಸುದಾರರು ಯಾರು ಬಾರದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಪೊಲೀಸರ ಅನುಮತಿ ಮೇರೆಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಅಂತ್ಯಸಂಸ್ಕಾರ (Cremation) ನಡೆಸಲು ಮುಂದೆ ಬಂದ ಸಮಾಜ ಸೇವಕರಾದ ಮಂಜು ಮುಟ್ಟಳ್ಳಿ , ಇಸ್ಮಾಯಿಲ ಸವುದ್ ಗವಾಯಿ ಹಾಗೂ ಪುರಸಭೆ ಪೌರ ಕಾರ್ಮಿಕರರು ಮತ್ತು ಆಂಬ್ಯುಲೆನ್ಸ್ ಚಾಲಕ ಏವರೆಟ್ಸ್, ಆರಕ್ಷಕ ಸಿಬ್ಬಂದಿಯವರ ಸಮ್ಮುಖದಲ್ಲಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ನಗರ ಠಾಣೆಯ ಎಎಸ್ಐ ಅಂತೋನಿ ಫರ್ನಾಂಡಿಸ್, ಸಿಬ್ಬಂದಿ ಮಹೇಶ ಪಟಗಾರ, ಪುರಸಭೆ ಪೌರಕಾರ್ಮಿಕರು ಇದ್ದರು.

ಇದನ್ನು ಓದಿ: bike collision/ ಬೈಕ್ ಡಿಕ್ಕಿಯಾಗಿ ಮಹಿಳೆ, ಎರಡು ವರ್ಷದ ಮಗುವಿಗೆ ಗಾಯ