ಭಟ್ಕಳ: ಪುರಸಭೆ ವ್ಯಾಪ್ತಿಯ ಹಳೆ ಬಸ್ ನಿಲ್ದಾಣ (ರಾಜಾಂಗಣ) ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಸಾಗಿ ಬಂದಿರುವ ಮೀನು ಮಾರುಕಟ್ಟೆ ಇದೀಗ ವಿವಾದದ ಕೇಂದ್ರವಾಗಿದೆ (Fish market controversy). ಬಡ ಮೀನು ವ್ಯಾಪಾರಿಗಳ ಬದುಕೇ ಅಪಾಯದಲ್ಲಿರುವ ಸ್ಥಿತಿ ಉಂಟಾಗಿದೆ. ಈ ಕುರಿತು ಹಿಂದೂ ಜಾಗರಣ ವೇದಿಕೆ ಭಟ್ಕಳ ಘಟಕವು ನಗರ ಠಾಣೆ ಪಿಐ ದಿವಾಕರ ಪಿ ಎಂ ಅವರಿಗೆ ಮನವಿ ಸಲ್ಲಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸುಮಾರು 150–200 ಪುರುಷ–ಮಹಿಳೆಯರು ಈ ಮಾರುಕಟ್ಟೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದು, ಅದರ ಆಧಾರದ ಮೇಲೆ ಹಣ್ಣು–ತರಕಾರಿ, ದಿನಸಿ–ಕಿರಾಣಿ ಅಂಗಡಿಗಳು ಹಾಗೂ ರಿಕ್ಷಾ ಚಾಲಕರು ಬದುಕು ಕಟ್ಟಿಕೊಂಡಿದ್ದಾರೆ. ಕಾಲಕಾಲಕ್ಕೆ ನವೀಕರಿಸಲ್ಪಟ್ಟಿದ್ದರೂ, ಮಾರುಕಟ್ಟೆಯ ಚಟುವಟಿಕೆ ಎಂದಿನಂತೆಯೇ ಇದೇ ಸ್ಥಳದಲ್ಲಿ ಮುಂದುವರಿದಿದೆ.

ಇದನ್ನು ಓದಿ: Cremation/ ಭಿಕ್ಷುಕನ ಮೃತದೇಹದ ಅಂತ್ಯಸಂಸ್ಕಾರ

ಆದರೆ, ಸೆಪ್ಟೆಂಬರ್ 1ರಿಂದ ಸಂತೆ ಮಾರ್ಕೆಟಿನಲ್ಲಿ ಕೇವಲ 60 ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿ ಹೊಸ ಮೀನು ಮಾರುಕಟ್ಟೆ ಆರಂಭಿಸಿರುವುದರಿಂದ ಗೊಂದಲ ಹುಟ್ಟಿಕೊಂಡಿದೆ (Fish market controversy). ಧರ್ಮದ ಹೆಸರಿನಲ್ಲಿ ಕೆಲವರು ತಮ್ಮದೇ ಸಮುದಾಯದವರನ್ನು ಅಲ್ಲಿ ಖರೀದಿಗೆ ಪ್ರಚೋದಿಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವೇಳೆ ಹಳೆ ಮಾರುಕಟ್ಟೆಯ ವಿರುದ್ಧ ‘ಸ್ವಚ್ಛತೆ’ ಹೆಸರಿನಲ್ಲಿ ಅಪಪ್ರಚಾರ ನಡೆಯುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: Prize distribution/ ಶಿಕ್ಷಕರಿಗೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ  ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಸ್ಥಳೀಯರ ಅನುಮಾನ ಪ್ರಕಾರ, ಹಳೆ ಮಾರುಕಟ್ಟೆ ಮುಚ್ಚಿಸಿ ಆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪುರಸಭೆಯ ಕೆಲ ಅಧಿಕಾರಿಗಳೂ ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ಭಟ್ಕಳವು ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಂತಹ ಧಾರ್ಮಿಕ ಪ್ರಚೋದನೆಗಳು ಮುಂದಿನ ದಿನಗಳಲ್ಲಿ ಶಾಂತಿ–ಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಭೀತಿ ವ್ಯಕ್ತವಾಗಿದೆ. ಹೀಗಾಗಿ ಪ್ರಚೋದನೆ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೀನು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಇದನ್ನು ಓದಿ: Versatile teacher/ ಬಹುಮುಖ ಪ್ರತಿಭೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿಗೆ ಒಲಿದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಜಿಲ್ಲಾ ಹಿಂದೂ ಜಾಗರಣಾ ಸಹ ಸಂಯೋಜಕ ದಿನೇಶ ನಾಯ್ಕ, ತಾಲೂಕು ಸಂಯೋಜಕ ಜಯಂತ ನಾಯ್ಕ, ಸಹ ಸಂಯೋಜಕ ನಾಗೇಶ ನಾಯ್ಕ, ಕುಮಾರ ನಾಯ್ಕ, ರಾಘವೆಂದ್ರ ನಾಯ್ಕ, ಶ್ರೀಕಾಂತ ನಾಯ್ಕ ಆಸರಕೇರಿ, ರಾಘವೆಂದ್ರ ನಾಯ್ಕ ಮುಟ್ಟಳ್ಳಿ, ವಿನಾಯಕ ಆಚಾರಿ, ಶ್ರೀನಿವಾಸ ನಾಯ್ಕ ಹನುಮಾನ ನಗರ ಮುಂತಾದವರು ಉಪಸ್ಥಿತರಿದ್ದರು.

ಇದನ್ನು ಓದಿ: Insult’ to journalist/ ಪತ್ರಕರ್ತೆಗೆ ‘ಅವಮಾನ’ – ದೇಶಪಾಂಡೆ ಕ್ಷಮೆಯಾಚಿಸಲಿ: ಶಿವಾನಿ ಶಾಂತಾರಾಮ