ಭಟ್ಕಳ: ಕೂಲಿ ಕಾರ್ಮಿಕನಿಗೆ ಬೆದರಿಕೆ (Threat) ಹಾಕಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಹರದ ಬಂದರ ರಸ್ತೆಯ ಜುಲೀಫ್ ತಂದೆ ಹಸನ ತಹಾ ರುಕ್ನುದ್ದಿನ (೩೯) ಎಂಬವರು ಬಂದರ ರಸ್ತೆಯ ೧ನೇ ಕ್ರಾಸ್ ನಿವಾಸಿ ಆಸೀಫ್ ಇಕ್ಬಾಲ ಇಕ್ಕೇರಿ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೂರದಲ್ಲಿ ತಿಳಿಸಿರುವಂತೆ, ದಿನಾಂಕ ೦೮-೦೧-೨೦೨೬ ರಂದು ಪಿರ್ಯಾದಿಯು ಸುಲ್ತಾನ ಸ್ಟ್ರೀಟ್ ದಲ್ಲಿರುವ ತಂದೆಯ ಮನೆಗೆ ಹೋಗಿ ಮರಳಿ ಭಟ್ಕಳ ಬಂದರ ರೋಡ ೧ನೇ ಕ್ರಾಸದಲ್ಲಿರುವ ತನ್ನ ಮನೆಗೆ ಸಾಯಂಕಾಲ ೬-೦೦ ಗಂಟೆಗೆ ಬಂದಾಗ ಪಿರ್ಯಾದಿಯ ಮನೆಯ ಸಮೀಪ ಮದೀನಾ ಕಾಲೋನಿಯ ಅಬ್ದುಲ ಖಾದೀರ ಜೈಲಾನಿ ಜೊತೆ ನಿಂತುಕೊಂಡಿದ್ದ ಆಪಾದಿತ ಆಸೀಫ್ ಇಕ್ಬಾಲ ಇಕ್ಕೇರಿ ಬೆದರಿಕೆ ಹಾಕಿದ್ದಾನೆ. ಪಿರ್ಯಾದಿಯನ್ನು ನೋಡಿ ನಿಮ್ಮ ೪ ಜನರ ಮೇಲೆ ಡೆಲ್ಲಿ ಹೈ ಕೋರ್ಟನಲ್ಲಿ ಕೇಸ ಹಾಕಿ ನಿಮ್ಮೆಲ್ಲರನ್ನು ಜೈಲಿಗೆ ಕಳುಹಿಸುತ್ತೇನೆ. ನಿಮ್ಮಿಂದ ತನಗೆ ಏನು ಮಾಡಲಿಕ್ಕೆ ಆಗಲಿಲ್ಲ ಅಂತಾ ಧಮಕಿ ಹಾಕಿ ನವಾಯತಿ ಭಾಷೆಯಲ್ಲಿ ಬೈದಿರುತ್ತಾನೆ (threat) ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: Property dispute/ ಸಹೋದರರ ನಡುವೆ ಆಸ್ತಿ ಕಲಹ



