ಭಟ್ಕಳ: ಸೋಡಿಗದ್ದೆ (Sodigadde) ಶ್ರೀ ಮಹಾಸತಿ ದೇವಸ್ಥಾನದ ನೂತನ ಕಟ್ಟಡದ ನೀಲನಕ್ಷೆ ಬಿಡುಗಡೆಗೊಳಿಸಿ ನಿಧಿ ಸಂಗ್ರಹಕ್ಕೆ ಸ್ಥಳೀಯ ಶಾಸಕ, ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ (Mankal Vaidya) ಮಂಕಾಳ ವೈದ್ಯ ಚಾಲನೆ ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, ಸೋಡಿಗದ್ದೆ (Sodigadde) ಶ್ರೀ ಮಹಾಸತಿ ದೇವಸ್ಥಾನದ ಶಿಲಾಮಯ ಕಟ್ಟಡವನ್ನು ₹9.95 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸರಕಾರದಿಂದ ಒಪ್ಪಿಗೆ ಸಿಕ್ಕಿದೆ. ನೂತನ ದೇವಸ್ಥಾನ ನಿರ್ಮಿಸಲು ಹಣದ ಕೊರತೆ ಎಂದಿಗೂ ಆಗುವುದಿಲ್ಲ. ನಮ್ಮ ಪ್ರಥಮ ಆದ್ಯತೆ ಶಾಲೆ, ದೇವಸ್ಥಾನ, ಮಠ ನಿರ್ಮಿಸುವುದಾಗಿದೆ. ಸೋಡಿಗದ್ದೆ ದೇವಸ್ಥಾನದ ವಿಚಾರದಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ. ದೇವಸ್ಥಾನದ ಕಟ್ಟಡಕ್ಕೆ ಸರಕಾರ ಮತ್ತು ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ. ಆದಷ್ಟು ಬೇಗ ಕಟ್ಟಡ ಶಿಲನ್ಯಾಸಕ್ಕೆ ಸಮಿತಿಯವರು ದಿನಾಂಕ ನಿಗದಿಪಡಿಸಿ ಕೆಲಸ ಆರಂಭಿಸಬೇಕು. ಒಂದು ವರ್ಷದೊಳಗಾಗಿ ದೇವಸ್ಥಾನದ ಸಂಪೂರ್ಣ ಕೆಲಸ ಮುಗಿಸಬೇಕು ಎಂದರು.
ಇದನ್ನು ಓದಿ: Online fraud/ ಕೆಲಸ ಕೊಡಿಸುವ ನೆಪದಲ್ಲಿ ಶಿಕ್ಷಕಗೆ ವಂಚನೆ
ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮಾತನಾಡಿ, ಈಗಾಗಲೇ ಸರಕಾರದ ಖಾತೆಯಲ್ಲಿ ಸೋಡಿಗದ್ದೆ ದೇವಸ್ಥಾನದ ₹7 ಕೋಟಿ ಹಣ ಇದ್ದು, ಆರಂಭಿಕ ಕಾಮಗಾರಿ ಮಾಡಲು ತೊಂದರೆ ಆಗುವುದಿಲ್ಲ. ದೇವಸ್ಥಾನದ ಜೊತೆಗೆ ಸನಿಹದಲ್ಲಿರುವ ಅಂಗನವಾಡಿ ಮತ್ತು ಶಾಲೆಯನ್ನೂ ಸಹ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದರು.
ಇದನ್ನು ಓದಿ: Bike skid/ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್: ಮಹಿಳೆ ಗಂಭೀರ
ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ನಾಗರಾಜ ಈ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಸುಧಾ ತಳವಾರ , ಶ್ರೀ ಮಹಾಸತಿ ಅಭಿವೃದ್ದಿ ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ, ಉಪಾಧ್ಯಕ್ಷ ನಾಗರಾಜ ನಾಯ್ಕ, ಮಹಾಸತಿ ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಅಚ್ಚುತ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಖಜಾಂಚಿ ಚನ್ನಯ್ಯ ಮೊಗೇರ, ಶನಿಯಾರ ಮೊಗೇರ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನು ಓದಿ: Murdeshwar Jathre/ ಅದ್ದೂರಿಯಾಗಿ ನಡೆದ ಮುರ್ಡೇಶ್ವರ ಜಾತ್ರೆ



