ಭಟ್ಕಳ: ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳನ್ನು (School children) ಠಾಣೆಗೆ ಆಹ್ವಾನಿಸಿ, ಪಿ.ಎಸ್.ಐ ಭರಮಪ್ಪ ಬೆಳಗಲಿ ಅವರ ನೇತೃತ್ವದಲ್ಲಿ ಕಾನೂನು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ (school children) ERSS–112 ತುರ್ತು ಸಹಾಯವಾಣಿ ಬಳಕೆ ವಿಧಾನ, ಮಕ್ಕಳ ಕಾಯ್ದೆಗಳು, ಪೋಕ್ಸೋ ಕಾಯ್ದೆಯ ಮಹತ್ವ, ಸೈಬರ್ ಕ್ರೈಂನಿಂದ ರಕ್ಷಣೆ, ಹಾಗೂ ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಕುರಿತು ಸರಳವಾಗಿ ವಿವರಿಸಲಾಯಿತು. ಕಾನೂನು ಅರಿವು ಬಾಲ್ಯದಲ್ಲೇ ಅಗತ್ಯವಿದ್ದು, ತುರ್ತು ಸಂದರ್ಭಗಳಲ್ಲಿ ಸಹಾಯವನ್ನು ಹೇಗೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಯಿತು.

ಇದನ್ನು ಓದಿ: Sodigadde/ ಸೋಡಿಗದ್ದೆ ದೇವಸ್ಥಾನದ ನೀಲನಕ್ಷೆ ಬಿಡುಗಡೆ, ನಿಧಿ ಸಂಗ್ರಹಕ್ಕೆ ಚಾಲನೆ

ಪೊಲೀಸ್ ಇಲಾಖೆ ಮತ್ತು ಶಾಲೆಗಳ ನಡುವಿನ ಇಂತಹ ಸಂವಾದಾತ್ಮಕ ಕಾರ್ಯಕ್ರಮಗಳು ಮಕ್ಕಳಲ್ಲಿ ಭದ್ರತೆ ಹಾಗೂ ಜವಾಬ್ದಾರಿಯ ಅರಿವು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಧಿಕಾರಿಗಳು ಹೇಳಿದರು.

ಇದನ್ನು ಓದಿ: Online fraud/ ಕೆಲಸ ಕೊಡಿಸುವ ನೆಪದಲ್ಲಿ ಶಿಕ್ಷಕಗೆ ವಂಚನೆ

ಈ ಸಂದರ್ಭದಲ್ಲಿ ಜಾಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಸೇರಿದಂತೆ ಶಾಲೆಯ ಇತರ ಶಿಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನು ಓದಿ: Bike skid/ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್: ಮಹಿಳೆ ಗಂಭೀರ