ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ (BJP government) ಅವಧಿಯಾದ ೨೦೧೮ರಿಂದ ೨೦೨೩ರವರೆಗೆ ಒಟ್ಟು ೮೭ ಹೊಸ ಬಸ್‌ಗಳನ್ನು (new buses) ರಸ್ತೆಗಿಳಿಸಲಾಗಿತ್ತು. ಅದೇ ಕಾಂಗ್ರೆಸ್ ಸರ್ಕಾರ (Congress government) ೨೦೨೩ರಿಂದ ೨೦೨೫ರವರೆಗೆ ಎರಡು ವರ್ಷಗಳಲ್ಲಿ ೮೪ ಹೊಸ ಬಸ್‌ಗಳನ್ನು (new buses) ಬಿಟ್ಟಿದೆ ಎಂದು ಅಂಕಿ-ಅಂಶಗಳೊಂದಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ (Bhatkal) ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಇತ್ತೀಚೆಗೆ ಶಿರಸಿಯಲ್ಲಿ ಮಾರಿಕಾಂಬಾ ಜಾತ್ರೆಯ ಸಿದ್ಧತೆ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ (Mankal Vaidya) ಅವರು ಬಸ್‌ಗಳ ಕೊರತೆಗೆ ಬಿಜೆಪಿ ಕಾರಣ ಎಂದು ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
ಇದನ್ನು ಓದಿ: Man missing/ ವ್ಯಕ್ತಿ ನಾಪತ್ತೆ; ಪತ್ನಿ ದೂರು
ಮುಂದುವರಿದು ಮಾತನಾಡಿದ ಅವರು, ಉತ್ತರ ಕನ್ನಡ ವಿಭಾಗದಲ್ಲಿ ೨೦೨೩ರಿಂದ ೨೦೨೫ರವರೆಗೆ ಒಟ್ಟು ೬೯೨ ಹಳೆಯ ಬಸ್‌ಗಳನ್ನು ನವೀಕರಿಸಲಾಗಿದೆ. ಇದರಲ್ಲಿ ಶಿರಸಿ ಘಟಕಕ್ಕೆ ೧೫೫ ಬಸ್‌ಗಳ ನವೀಕರಣ ನಡೆದಿದೆ ಎಂದು ಮಾಹಿತಿ ನೀಡಿದರು.
ವಿಡಿಯೋ ಸಹಿತ ಇದನ್ನು ಓದಿ: Kenda Seve/ ಭಟ್ಕಳ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಕ್ಷೇತ್ರದಲ್ಲಿ ಹರಕೆಯ ಕೆಂಡ ಸೇವೆ ಸಂಪನ್ನ
ಇದೇ ಸಂದರ್ಭದಲ್ಲಿ ಅಘನಾಶಿನಿ ಬೇಡ್ತಿ ನದಿ ತಿರುವು ಯೋಜನೆ ಕುರಿತು ಪ್ರಸ್ತಾವಿಸುತ್ತಿರುವಾಗ, ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ನಿಮ್ಮ ಪಕ್ಷದ ನಿಲುವು ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನಂತಮೂರ್ತಿ ಹೆಗಡೆ, ಜಿಲ್ಲೆಯ ಹಿತಕ್ಕಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಿಡಿಯೋ ಸಹಿತ ಇದನ್ನು ಓದಿ: Sodigadde Jathre/ ಸೋಡಿಗದ್ದೆ ಜಾತ್ರೆ ಆರಂಭ
ಈ ಸಂದರ್ಭದಲ್ಲಿ ರಮೇಶ ನಾಯ್ಕ, ಗಣೇಶ ಹೆಗಡೆ, ಮಂಜುನಾಥ ನಾಯ್ಕ, ರಾಘವೇಂದ್ರ ನಾಯ್ಕ, ಶ್ರೀನಿವಾಸ ನಾಯ್ಕ ಇದ್ದರು.



