ಭಟ್ಕಳ: ಮಹಿಳೆ ಚಲಾಯಿಸುತ್ತಿದ್ದ ಕಾರು ಮೋಟರ್ ಸೈಕಲ್ಲಿಗೆ ಡಿಕ್ಕಿಯಾಗಿ (car collided) ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಅರ್ಚಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ನಗರದ ಖಲೀಫಾ ಸ್ಟ್ರೀಟ್ ನಿವಾಸಿ ಸುಹೇಮಾ ಕೊಂ ಮಹ್ಮದ್ ಇಮ್ರಾನ್ ಅಯ್ದುರುಸಾ ಕಾರು ಚಲಾಯಿಸುತ್ತಿದ್ದರು. ದಿನಾಂಕ ೦೫-೦೨-೨೦೨೬ರಂದು ಬೆಳಿಗ್ಗೆ ೯ ಗಂಟೆ ಸುಮಾರಿಗೆ ತಮ್ಮ ಕಾರನ್ನು ಹೊನ್ನಾವರ (Honnavar) ಕಡೆಯಿಂದ ಕುಂದಾಪುರ (Kundapur) ಕಡೆಗೆ ಹೋಗಲು ವೇಗವಾಗಿ ಬಂದಿದ್ದಾರೆ. ಭಟ್ಕಳ ಶಹರದ ರಂಗಿನಕಟ್ಟಾ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಒಮ್ಮೇಲೆ ಅಜಾಗರೂಕತೆಯಿಂದ ಯಾವುದೇ ಸಿಗ್ನಲ್ ನೀಡದೆ ತಮ್ಮ ಕಾರನ್ನು ಯು ಟರ್ನ ಮಾಡಿ ಭಟ್ಕಳ ಕಡೆಗೆ ಕಾರಿನ ಹಿಂದಿನಿಂದ ಬರುತ್ತಿದ್ದ ಮೋಟಾರ ಸೈಕಲ್ಗೆ ಡಿಕ್ಕಿ ಹೊಡೆದಿದ್ದಾರೆ (car collided).

ಇದನ್ನು ಓದಿ: foundation stone/ ಶ್ರೀ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ಶಿಲಾನ್ಯಾಸ ಫೆ ೮ರಂದು

ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಉತ್ತರ ಕೊಪ್ಪದ ಅರ್ಚಕ ಪ್ರಸಾದ ತಂದೆ ಗಣಪತಿ ಹೆಗಡೆ (28) ಮೋಟಾರ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದಾರೆ. ಗಾಯಗೊಂಡ ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಚಿನ್ಮಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ದೇವಸ್ಥಾನದ ಅರ್ಚಕ ಮುಂಡಳ್ಳಿಯ ಮಂಜುನಾಥ ತಂದೆ ವೆಂಕಟ್ರಮಣ ಭಟ್ಟ ಕಾರು ಚಾಲಕಿ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನು ಓದಿ: arrested/ ಕೋಳಿ ಅಂಕ ಆಡುತ್ತಿದ್ದ ಇಬ್ಬರ ಬಂಧನ