ಭಟ್ಕಳ: ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (Women’s Day) ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಉತ್ತರ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸವಿತಾ ಗೊಂಡ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, ಮಹಿಳೆಯರ ಸಾಮಾಜಿಕ ಸ್ಥಿತಿ ಹಾಗೂ ಭಾರತದಲ್ಲಿ ಮಹಿಳೆಯರಿಗೆ ದೊರೆಯುತ್ತಿರುವ ಗೌರವ ಮತ್ತು ಅವಕಾಶಗಳ ಕುರಿತು ವಿವರಿಸಿದರು. ಮತ್ತೊಬ್ಬ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಹಿಳೆಯರ ಪಾತ್ರ, ದೇಶದ ಸಂಸ್ಕೃತಿ ಹಾಗೂ ಇತಿಹಾಸದಲ್ಲಿ ಅವರ ಕೊಡುಗೆ ಮತ್ತು ಇಂದಿನ ಅವಕಾಶಗಳ ಕುರಿತು ಮಾತನಾಡಿದರು.

Bhatkal/ ಚಿತ್ರಾಪುರದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವೃದ್ಧ ಸಾವು

ಮಹಿಳಾ ದಿನಾಚರಣೆ (Women’s Day) ನಿಮಿತ್ತ ಭಟ್ಕಳ ತಾಲೂಕಿನ ಗುರು ಸುಧೀಂದ್ರ ಕಾಲೇಜಿನ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಾದ ಸರಸ್ವತಿ ಭಂಡಾರಿ (ಕಬಡ್ಡಿಯಲ್ಲಿ ಯುನಿವರ್ಸಿಟಿ ಬ್ಲೂ), ಪವಿತ್ರ ಮಡಿವಾಳ (ಕಬಡ್ಡಿಯಲ್ಲಿ ಯುನಿವರ್ಸಿಟಿ ಬ್ಲೂ), ಸಾಕ್ಷಿ ಡಿ ನಾಯ್ಕ(ಶಟಲ್ ಬ್ಯಾಡ್ಮಿಂಟನ್ ನಲ್ಲಿ ಯುನಿವರ್ಸಿಟಿ ಬ್ಲೂ), ಆಶಿತಾ ನಾಯ್ಕ (ಖೋ ಖೋ ಮತ್ತು ಕ್ರಾಸ್ ಕಂಟ್ರಿ ರೇಸ್ ನಲ್ಲಿ ಯುನಿವರ್ಸಿಟಿ ಬ್ಲೂ )ಹಾಗೂ ತ್ರಿಶಾ ಖಾರ್ವಿ (ಕರಾಟೆಯಲ್ಲಿ ಯೂನಿವರ್ಸಿಟಿ ಬ್ಲೂ) ಅವರನ್ನು ಸನ್ಮಾನಿಸಲಾಯಿತು.

Minister Mankal Vaidya / ಸಚಿವ ಮಂಕಾಳ ವೈದ್ಯರ ವಿರುದ್ಧ ಇ ಡಿ ತನಿಖಾ ಸಂಸ್ಥೆಗೆ ದೂರು ಸಲ್ಲಿಸಿ: ಕಾಂಗ್ರೆಸ್

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾನಿ ಶಾಂತಾರಾಮ ವಹಿಸಿದ್ದರು. ಯಮುನಾ ದಿನೇಶ ನಾಯ್ಕ ಪ್ರಾರ್ಥಿಸಿದರು. ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಸುನಿತಾ ಹೆರೂರ್ಕರ್ ಕಾರ್ಯಕ್ರಮ ನಿರೂಪಿಸಿದರು. ವಿಜಯ ಮತ್ತು ಕುಪ್ಪು ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸೇರಿದಂತೆ ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Hotels inspected/ ಎಲ್‌ಪಿಜಿ ದುರ್ಬಳಕೆ ತಡೆಗೆ ಭಟ್ಕಳದಲ್ಲಿ ಹೋಟೆಲ್‌ಗಳ ತಪಾಸಣೆ