ಭಟ್ಕಳ: ಕೂಲಿ ಕೆಲಸಕ್ಕೆಂದು ಹೋದ ಕಾರ್ಮಿಕನೊಬ್ಬ (labourer) ಮೃತಪಟ್ಟ ಘಟನೆ ಭಟ್ಕಳ (Bhatkal) ನಗರದಲ್ಲಿ ನಡೆದಿದೆ. ಮೃತರನ್ನು ಕುಕುನಿರ್ ನಿವಾಸಿ ಮಂಜುನಾಥ ಜಟ್ಟ ನಾಯ್ಕ (೫೪) ಎಂದು ಗುರುತಿಸಲಾಗಿದೆ. ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಮಿಕ (labourer) ಮಂಜುನಾಥ ಜಟ್ಟ ನಾಯ್ಕ ಅವರು ಮಾ ೧೪ರಂದು ಬೆಳಿಗ್ಗೆ ೭ ಗಂಟೆಗೆ ಮನೆಯಿಂದ ಕೂಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದರು. ನಂತರ ಮಾ ೧೪ರ ಮಧ್ಯರಾತ್ರಿ ೨ ಗಂಟೆಯಿಂದ ಮಾ ೧೫ರ ಮಧ್ಯಾಹ್ನ ೨.೩೦ರ ನಡುವಿನ ಅವಧಿಯಲ್ಲಿ ಭಾರತ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ದಿಲ್ಮನ್ ಮನೆ ಸಮೀಪದ ಖಾಲಿ ಜಾಗದಲ್ಲಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಹೃದಯಾಘಾತ ಅಥವಾ ಅಸ್ವಸ್ಥತೆಯಿಂದ ಬಿದ್ದು ಮೃತಪಟ್ಟಿರಬಹುದೆಂದು ದೂರಿನಲ್ಲಿ ತಿಳಿಸಲಾಗಿದೆ.
bus accident/ ಭಟ್ಕಳಕ್ಕೆ ಬರುತ್ತಿದ್ದ ಸಾರಿಗೆ ಬಸ್ ಅಪಘಾತ: ಒಬ್ಬ ಸಾವು
ಈ ಕುರಿತು ಹುರುಳಿಸಾಲ ಮಿನಿಹಿತ್ತಲು ನಿವಾಸಿ ಕೃಷ್ಣ ಸೋಮಯ್ಯ ನಾಯ್ಕ ಅವರು ಶಹರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
Memorandum/ ಮಾರಿಕಾಂಬಾ ದೇವಸ್ಥಾನದ ಎದುರು ರಂಜಾನ್ ಅಂಗಡಿ ಹಾಕದಿರಲು ಮನವಿ



