ಭಟ್ಕಳ: ಮೀನುಗಾರಿಕೆಗೆ (fishing) ತೆರಳಿದ್ದ ಮೀನುಗಾರ (fisherman) ಬೋಟ್ ಹತ್ತುವಾಗ ಅಕಸ್ಮತ್ತಾಗಿ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ತಾಲೂಕಿನ ಅಳ್ವೆಕೋಡಿ ಬಂದರಿನಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಓರಿಸ್ಸಾ (Orissa) ಮೂಲದ ಜೆತೇಂದ್ರ ಜೈರಾಮ ಬೀರಗಂಟೀಯಾ (೨೭) ಕಾಣೆಯಾದವರು. ಮಾ ೩೧ರಂದು ರಾತ್ರಿ ೮ ಗಂಟೆಯ ಸುಮಾರಿಗೆ ಅಳ್ವೆಕೊಡಿ ಬಂದರಿನಲ್ಲಿ ಮೀನುಗಾರಿಕೆಗೆ ಹೊರಡಲು ಜನಾಬಾಯಿ ಕೃಷ್ಣ ತಾಂಡೇಲ ಇವರ ಬೋಟ ಶ್ರೀ ಮುಕಾಂಬಿಕಾ ಬೋಟ್ ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಂದರಿನ ಆಳವಿರುವ ಸಮುದ್ರ ನೀರಿನಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾರೆ. ಈ ಕುರಿತು ಜೊತೆಗಿದ್ದ ಓರಿಸ್ಸಾ ಮೂಲದ ಮೀನುಗಾರ (fisherman) ದುಲವ ಗೋವರ್ಧನ ಆಡಾ (೨೫) ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Green flag/ ಹಸಿರು ಬಾವುಟ ವಿವಾದ: ಕಾನೂನು ಕ್ರಮಕ್ಕೆ ಒತ್ತಾಯ



