ಭಟ್ಕಳ: ಬುದ್ದಿವಾದ ಹೇಳಿದ್ದಕ್ಕೆ  ಗುಂಪು ಮಹಿಳೆ ಸಹಿತ ಮೂವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಪ್ಪನಕೊಡ್ಲು ಬಾಕಡಕೇರಿಯ ನಿವಾಸಿ ಕೂಲಿ ಕಾರ್ಮಿಕೆ ಮಾದೇವಿ ಕಾಶಿ ಬಾಕಡ (೨೫) ದೂರು ದಾಖಲಿಸಿದ್ದಾರೆ. ಬಾಕಡಕೇರಿಯವರಾದ ವಿಕಾಸ ಚಂದ್ರ ಬಾಕಡ, ಚಂದ್ರ ರಾಮಾ ಬಾಕಡ, ಸುರೇಶ ರಾಮಾ ಬಾಕಡ ಮತ್ತು ರಮೇಶ ರಾಮಾ ಬಾಕಡ, ಕಾಯ್ಕಿಣಿ ಬಸ್ತಿಯ ಮಹೇಶ ಮಂಜುನಾಥ ಬಾಕಡ ಹಾಗೂ ಮುರ್ಡೇಶ್ವರ (Murdeshwar) ಹರಿಜನಕೇರಿಯ ಅಣ್ಣಯ್ಯ ಚಂದ್ರು ಬಾಕಡ ಆರೋಪಿತರು.

car collision/ ಕಾರು ಡಿಕ್ಕಿಯಾಗಿ ರಾಯಲ್ ಎನ್‌ಫಿಲ್ಡ್ ಸವಾರಗೆ ಗಾಯ

ಏ ೨ರಂದು ರಾತ್ರಿ ೧೦ ಗಂಟೆ ಸುಮಾರಿಗೆ ಭಟ್ಕಳ ತಾಲೂಕಿನ ಚಿತ್ರಾಪುರದ ಬಪ್ಪನಕೊಡ್ಲು ಬಾಕಡಕೇರಿಯಲ್ಲಿ ಮಾದೇವಿಯವರು ಬುದ್ದಿವಾದ ಹೇಳಲು ಹೋಗಿದ್ದಕ್ಕೆ ಆರೋಪಿತರು ಸಿಟ್ಟು ಮಾಡಿಕೊಂಡು ಗುಂಪು ಕೂಡಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಮಾದೇವಿಯವರ ತಮ್ಮ ಮಂಜುನಾಥ ತಿಮ್ಮಾ ಬಾಕಡ ಇವರಿಗೆ ಬೀಯರ ಬಾಟ್ಲಿಯಿಂದ ತಲೆಗೆ ಹೊಡೆದಿದ್ದು ಬಿಡಿಸಲು ಮಧ್ಯ ಹೋದ ಮಾದೇವಿವರಿಗೆ ತಲೆಗೆ ಮಿಕ್ಸಿ ಜಾರಿನಿಂದ ಹೊಡೆದಿದ್ದಲ್ಲದೇ ಇನ್ನೊಬ್ಬ ತಮ್ಮನ ಮಗ ಸುನೀಲ ಅಣ್ಣಪ್ಪ ಬಾಕಡ ಈತನಿಗೆ ದೂಡಿ ಹಾಕಿದ್ದರಿಂದ ಗೋಡೆಗೆ ತಲೆಗೆ ತಾಗಿ ಗಾಯವಾಗಿದೆ. ಮಾದೇವಿಯವರ ಅಕ್ಕನ ಮಗ ಕೇಶವ ಕಾಶಿನಾಥ ಬಾಕಡ ಅವರ ಕೈಯಿಂದ ಮುಖಕ್ಕೆ ಹೊಡೆದು ಗಾಯನೋವುಪಡಿಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದಾಖಲಾದ ದೂರಿನಲ್ಲಿ (case filed) ತಿಳಿಸಲಾಗಿದೆ.

Case filed/ ಆಟೋ ಚಾಲಕನಿಂದ ಟಿಪ್ಪರ್ ಚಾಲಕನ ಮೇಲೆ ಹಲ್ಲೆ