ಭಟ್ಕಳ: ಟಿಪ್ಪರ್-ಆಟೋ ತಗುಲಿದ್ದಕ್ಕೆ ಟಿಪ್ಪರ್ ಚಾಲಕನ ಮೇಲೆ ಆಟೋ ಚಾಲಕ ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕ ದೂರು ದಾಖಲಿಸಿದ್ದಾರೆ (case filed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ದೇವಿನಗರದ ಜಾಲಿ ಕ್ವಾರ್ಟ್ರರ್ಸ್ ನಿವಾಸಿ ಮೊಹಮ್ಮದ ಮರ್ಧಾನ ತಂದೆ ಸುಲೇಮಾನ ಶೇಖ (೨೫) ಹಲ್ಲೆಗೊಳಗಾದ ಟಿಪ್ಪರ್ ಚಾಲಕರಾಗಿದ್ದರೆ, ಅಡುಗೆ ವೃತ್ತಿ ಮಾಡುವ ಬದ್ರಿಯಾ ಕಾಲೋನಿಯ ಅಬ್ದುಲ ಬಾಸಿತ ತಂದೆ ಮೊಹಮ್ಮದ ಇಸ್ಮಾಯಿಲ್ (೨೯) ಮತ್ತು ಬದ್ರಿಯಾ ಕಾಲೋನಿಯ ಚಾಲಕ ವೃತ್ತಿಯ ಅಬ ್ದಲ್ ಮಾಜೀದ್ ತಂದೆ ಮೊಹಮ್ಮದ ಇಸ್ಮಾಯಿಲ್ ಶೇಖ (೩೨) ಆರೋಪಿತರು.
Ganja/ ಗಾಂಜಾ ಸೇವಿಸಿದ ಮೂವರ ವಿರುದ್ಧ ಪ್ರಕರಣ
ಏ ೨ರಂದು ಸಂಜೆ ೫ ಗಂಟೆ ಸುಮಾರಿಗೆ ಭಟ್ಕಳ ತಾಲೂಕಿನ ಫಿರ್ಧೋಸ ನಗರದ ಕೋಳಿ ಫಾರ್ಮ ಹತ್ತಿರ ಮಹ್ಮದ್ ಮರ್ಧಾನ್ ಟಿಪ್ಪರ ಲಾರಿ ಚಲಾಯಿಸಿಕೊಂಡು ಫಿರ್ಧೋಸ ನಗರದ ಕಡೆಯಿಂದ ಬೆಂಡೆಖಾನ ಕಡೆಗೆ ಬರುವಾಗ ಆರೋಪಿ ಅಬ್ದುಲ್ ಮಾಜಿದ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಒಮ್ಮೆಲೆ ತನ್ನ ಬಲಕ್ಕೆ ಹೋಗಿ ಟಿಪ್ಪರ ಲಾರಿಗೆ ಹಿಂಬದಿಯಲ್ಲಿ ಬಲಬದಿಯಲ್ಲಿ ತಾಗಿಸಿದ್ದಾರೆ. ನಂತರ ಟಿಪ್ಪರ ಲಾರಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯಶಬ್ದಗಳಿಂದ ಬೈದಿದ್ದಾರೆ. ಇನ್ನೊಬ್ಬ ಆರೋಪಿತರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಟಿಪ್ಪರ ಲಾರಿಯ ಶೋ ಗ್ಲಾಸ್‌ಗೆ ಹೊಡೆದು ಹಾನಿ ಮಾಡಿ, ಕಾಲಿನಿಂದ ಮುಂದಿನ ಬಂಪರಗೆ ಒದ್ದು, ಬಾಗಿಲನ್ನು ಹಿಡಿದು ಎಳೆದಾಡಿ ಹಾನಿ ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವುದಾಗಿ ದಾಖಲಾಗಿರುವ ದೂರಿನಲ್ಲಿ (case filed) ತಿಳಿಸಲಾಗಿದೆ.
Fisherman/ ಅಳ್ವೆಕೋಡಿಯಲ್ಲಿ ಬೋಟಿನಿಂದ ಬಿದ್ದು ಮೀನುಗಾರ ಸಮುದ್ರಪಾಲು



