ಭಟ್ಕಳ: ತಾಲೂಕಿನ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಶ್ರೀ ಭವಾನಿಶಂಕರ ದೇವರ ೧೬೫ನೇ ವರ್ಷದ ರಥೋತ್ಸವವು (Rathotsava) ಹನುಮಜ್ಜಯಂತಿ (Hanuman jayanti) ಪ್ರಯುಕ್ತ ಶ್ರೀ ಮಠದ ಪೀಠಾಧಿಪತಿ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶ್ರೀ ಮಠದ ಸಂಪ್ರದಾಯದಂತೆ ಮಧ್ಯಾಹ್ನ ೧೨ ಗಂಟೆಗೆ ರಥಾರೋಹಣ ನಡೆಯಿತು. ಶ್ರೀ ಭವಾನಿಶಂಕರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಗಿ, ನೂರಾರು ಭಕ್ತರು ರಥ ಕಾಣಿಕೆ, ಹಣ್ಣು-ಕಾಯಿ, ಹೂವುಗಳನ್ನು ಅರ್ಪಿಸಿ ಭಕ್ತಿ ಸಮರ್ಪಣೆ ಸಲ್ಲಿಸಿದರು. ಸಂಜೆ ೫.೩೦ಕ್ಕೆ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ರಥವನ್ನು ಏರಿದ ಕ್ಷಣದಿಂದಲೇ ಭಕ್ತರ ಹರ್ಷೋದ್ಘಾರಗಳ ನಡುವೆ ರಥಬೀದಿಯಲ್ಲಿ ರಥವನ್ನು ಎಳೆಯಲಾಯಿತು. ಬಳಿಕ ಅದೇ ಮಾರ್ಗದಲ್ಲಿ ರಥವು ಸಂಚರಿಸಿ ನಿರ್ದಿಷ್ಟ ಸ್ಥಳದಲ್ಲಿ ನೆಲೆಗೊಂಡಿತು. ಈ ವೇಳೆ ಶ್ರೀಗಳು ರಥದ ಮೇಲಿಂದಲೇ ಭಕ್ತರಿಗೆ ಪ್ರಸಾದ ವಿತರಣೆ ಮಾಡಿ ಭಕ್ತಿಭಾವ ಹೆಚ್ಚಿಸಿದರು. ತಟ್ಟಿರಾಯ ಮತ್ತು ಚಂಡೆ ವಾದ್ಯಗಳು ರಥೋತ್ಸವದ (Rathotsava) ಪ್ರಮುಖ ಆಕರ್ಷಣೆಯಾಗಿದ್ದವು.
CM Medal/ ಪಿಎಸ್ಐ ನವೀನ್ ನಾಯ್ಕಗೆ ಸಿಎಂ ಪದಕ ಪ್ರದಾನ
ಡಿವೈಎಸ್ಪಿ ಗಿರೀಶ ಬಿ. ಹಾಗೂ ಗ್ರಾಮೀಣ ಠಾಣೆಯ ಪಿಐ ವೆಂಕಟೇಶ್ ಎಸ್ ಮುರ್ನಾಲ್ ನೇತೃತ್ವದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ರಥೋತ್ಸವ ಶಾಂತಿಯುತವಾಗಿ ನೆರವೇರಿತು. ರಥೋತ್ಸವದಲ್ಲಿ ಶ್ರೀ ಮಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಸಂಜೆ ೬.೩೦ಕ್ಕೆ ಸ್ವಾಮೀಜಿ ಉಪಸ್ಥಿತಿಯಲ್ಲಿ ಭಕ್ತರ ಸಮ್ಮುಖದಲ್ಲಿ ಧರ್ಮಸಭೆ ನಡೆಯಿತು.
Durgaparameshwari/ ೬೦೦ ವರ್ಷಗಳ ಇತಿಹಾಸದ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ



