ಭಟ್ಕಳ: ಬುಧವಾರ ಮಧ್ಯಾಹ್ನ ಸಂಭವಿಸಿದ ಲಾರಿ-ಸ್ಕೂಟಿ ಅಪಘಾತದಲ್ಲಿ (accident) ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಭಟ್ಕಳ (Bhatkal) ತಾಲೂಕಿನ ಬಸ್ತಿಯ ರಾಷ್ಟ್ರೀಯ ಹೆದ್ದಾರಿ(National Highway)-೬೬ರ ಕಾಯ್ಕಿಣಿ ಗ್ರಾಮ ಪಂಚಾಯತಿ ಕ್ರಾಸ್ ಬಳಿಯ ಸ್ಥಳಕ್ಕೆ (accident spot) ಶನಿವಾರದಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಭೇಟಿ ನೀಡಿ, ವಾಹನ ಸಂಚಾರ ಮತ್ತು ಅಲ್ಲಿನ ಪ್ರಸ್ತುತ ಸುರಕ್ಷತಾ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎಸ್‌ಪಿ ದೀಪನ್ ಎಂ ಎನ್ ಮಾತನಾಡಿ, ‘ರಸ್ತೆ ಸಂಚಾರ ನಿರ್ವಹಣೆಯನ್ನು ಬಲಪಡಿಸಲು ಮತ್ತು ಇಂತಹ ಅಪಘಾತಗಳು ಮರುಕಳಿಸದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಂಬಂಧಪಟ್ಟ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯದ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಡಿವೈಎಸ್ಪಿ. ಬಿ ಗಿರೀಶ, ಮುರ್ಡೇಶ್ವರ ಪಿಎಸ್‌ಐ ಹನುಮಂತ ಬಿರಾದಾರ ಇದ್ದರು.

job abroad/ ವಿದೇಶದಲ್ಲಿ ಉದ್ಯೋಗದಾಸೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭಟ್ಕಳದ ಕ್ಲೀನರ್ 

ಅಂದು ನಡೆದ ಅಪಘಾತವು ಸ್ಥಳೀಯ ನಿವಾಸಿಗಳ ಪ್ರತಿಭಟನೆಗೆ ಕಾರಣವಾಯಿತು. ಅವರು ಮೃತದೇಹವನ್ನು ಸ್ಥಳಾಂತರಿಸುವುದನ್ನು ತಡೆಹಿಡಿದು ಜಂಕ್ಷನ್‌ನಲ್ಲಿ (accident spot) ಸುರಕ್ಷತೆಯನ್ನು ಸುಧಾರಿಸಲು ತಕ್ಷಣವೇ ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆ ಎಸ್ಪಿ ಭೇಟಿ ಮಹತ್ವ ಪಡೆದುಕೊಂಡಿತು.

Karate Tournament/ ನಾಗಶ್ರೀ ಮಾರ್ಷಲ್ ಆರ್ಟ್ಸ್ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ