ಭಟ್ಕಳ: ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜುಲೈ ೧೯ರಿಂದ ೨೪ರವರೆಗೆ ಲೋಕಕಲ್ಯಾಣಾರ್ಥವಾಗಿ ಕೃಷ್ಣ ಯಜುರ್ವೇದ ಸ್ವಾಹಾಕಾರ, ಸ್ವರ್ಣಪಾದುಕಾ ಭಿಕ್ಷೆ ಹಾಗೂ ಧನ್ವಂತರಿ ಹವನ (Religious programs) ಏರ್ಪಡಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವರ್ಷಂಪ್ರತಿಯಂತೆ ಕಿತ್ರೆ ದೇವಿಮನೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಕಾರ್ಯಕ್ರಮ (Religious programs) ಆಯೋಜಿಸಲಾಗುತ್ತಿದ್ದು, ಈ ಸಲವೂ ಸಹ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ಜುಲೈ ೧೯ರಂದು ಭಾನುವಾರ ಕೃಷ್ಣ ಯಜುರ್ವೇದ ಸ್ವಾಹಾಕಾರ ಆರಂಭಗೊಂಡಿದೆ. ಜುಲೈ ೨೧ರಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸ್ವರ್ಣಪಾದುಕೆ ಆಗಮಿಸಲಿದೆ. ಜುಲೈ ೨೨ರಂದು ಶುಕ್ಲ ಯುಜುರ್ವೇದ ಪಾರಾಯಣ, ಸ್ವರ್ಣಪಾದುಕಾ ಪೂಜೆ ಮತ್ತು ಭಿಕ್ಷೆ ನಡೆಯಲಿದೆ. ಜುಲೈ ೨೩ರಂದು ಬೆಳಿಗ್ಗೆ ಗಣಪತಿ ಅಥರ್ವಶೀರ್ಷ ಹವನ ನಡೆಯಲಿದೆ. ಜುಲೈ ೨೪ರಂದು ಶುಕ್ರವಾರ ಕೃಷ್ಣ ಯಜುರ್ವೇದ ಸ್ವಾಹಾಕಾರ ಮತ್ತು ಧನ್ವಂತರಿ ಹವನದ ಪೂರ್ಣಾಹುತಿ ನಡೆಯಲಿದ್ದು, ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ದೇವಿಮನೆ ಆಡಳಿತ ಮಂಡಳಿ ಮತ್ತು ಶಿವಶಾಂತಿಕಾ ಧಾರ್ಮಿಕ ಮಂಡಳಿಯವರು ಕೋರಿದ್ದಾರೆ.
Karate Competition/ ತುಷಾರ ಮಹಾಲೆ ಸಹಿತ ೧೬ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ


